alex Certify ಯುವತಿಯರು ಪೋರ್ನ್ ವಿಡಿಯೋ ನೋಡಬಾರದೇ…? ಶೀರ್ಷಿಕೆ ಕಾರಣಕ್ಕೆ ಹೆಚ್ಚು ವೀವ್ಸ್ ಪಡೀತಾ ಈ ವೆಬ್​ ಸಿರೀಸ್​..!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯರು ಪೋರ್ನ್ ವಿಡಿಯೋ ನೋಡಬಾರದೇ…? ಶೀರ್ಷಿಕೆ ಕಾರಣಕ್ಕೆ ಹೆಚ್ಚು ವೀವ್ಸ್ ಪಡೀತಾ ಈ ವೆಬ್​ ಸಿರೀಸ್​..!?

ಭಾರತದಲ್ಲಿ ವೆಬ್​ ಸಿರೀಸ್​ಗಳ ಜಮಾನ ಸದ್ದಿಲ್ಲದೇ ಸ್ಥಾನವನ್ನ ಪಡೆಯುತ್ತಿದೆ. ಈ ವೆಬ್​ ಸಿರೀಸ್​ಗಳು 10 ವರ್ಷಗಳ ಹಿಂದೆಯೇ ದೇಶದಲ್ಲಿ ಕಾಲಿಟ್ಟಿದ್ದರೂ ಸಹ ಈಗೀಗ ಹೆಚ್ಚಿನ ಪ್ರತೀತಿಯನ್ನ ಗಳಿಸುತ್ತಿವೆ. ಪಿಚರ್ಸ್​ನಂತಹ ಸಿರೀಸ್​ಗಳಂತೂ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಒಳ್ಳೆಯ ಹೆಸರನ್ನ ತಂದುಕೊಟ್ಟಿದೆ ಅಂತಾ ಹೇಳಿದ್ರೂನು ತಪ್ಪಾಗಲಿಕ್ಕಿಲ್ಲ.

ಆದರೆ ಇಷ್ಟೆಲ್ಲ ಖ್ಯಾತಿ ನಡುವೆ ವೆಬ್​ಸೀರೀಸ್​ಗಳು ಸಮಾಜಕ್ಕೆ ಯಾವ ರೀತಿಯ ಸಂದೇಶ ಕೊಡ್ತಿವೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಎಲ್ಲಾ ಸಿರೀಸ್​ಗಳು ಅಲ್ಲದೇ ಹೋದರೂ ಸಹ ಕೆಲ ಸಿರೀಸ್​ಗಳು ವೈಭವೀಕರಿಸಲು ಅವಶ್ಯಕತೆ ಇರದ ಸನ್ನಿವೇಶಗಳಿಗೆ ಹೆಚ್ಚಿನ ಮಹತ್ವ ನೀಡಿದ್ಯಾ ಅನ್ನೋ ಪ್ರಶ್ನೆ ಎದುರಾಗಿದೆ.

ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಸಾಕಷ್ಟು ಹೆಸರಾಂತ ಧಾರವಾಹಿಗಳನ್ನ ಭಾರತೀಯ ಟೆಲಿವಿಷನ್​ ಲೋಕಕ್ಕೆ ನೀಡಿರುವ ಏಕ್ತಾ ಕಪೂರ್​ರ ಬಾಲಾಜಿ ಟೆಲಿಫಿಲ್ಮ್ಸ್​ನ ಅಡಿಯಲ್ಲಿ 2010ರಲ್ಲಿ ಮೊದಲ ಬಾರಿಗೆ ತೆರೆ ಕಂಡ ವೆಬ್​ ಸಿರೀಸ್​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ‌ʼಬೋಲ್​ ನೀತಿ ಬೋಲ್ʼ​​ ವೆಬ್​ಸಿರೀಸ್​ ಸಾಕಷ್ಟು ಎಪಿಸೋಡ್​ಗಳನ್ನ ಯುಟ್ಯೂಬ್​ನಲ್ಲಿ ಹರಿಬಿಡಲಾಗಿದೆ. ಅಂದರೆ ಹೆಣ್ಣು ಮಕ್ಕಳು ಪೋರ್ನ್ ವಿಡಿಯೋ ಏಕೆ ನೋಡಬಾರದು ಎಂಬ ಶೀರ್ಷಿಕೆ ಹೊಂದಿರುವ ಎಪಿಸೋಡ್​ ಮಾತ್ರ 2 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...