ಯುಪಿ ಚುನಾವಣಾ ಫಲಿತಾಂಶದ ಬಳಿಕ ಬುಲ್ಡೋಜರ್ ಬಳಕೆ ಮಾಡುತ್ತೇವೆ; ಯೋಗಿ ಆದಿತ್ಯನಾಥ್ ಎಚ್ಚರಿಕೆ 18-02-2022 8:41PM IST / No Comments / Posted In: Latest News, India, Live News ಕೇಂದ್ರ ಸಚಿವ ಎಸ್ ಪಿ ಬಘೇಲ್ ಮೇಲೆ ದಾಳಿಯನ್ನು ನಡೆಸಿದ ದುಷ್ಕರ್ಮಿಗಳಿಗೆ ಉತ್ತರ ಪ್ರದೇಶ ಸಿಎಂ ಯೋಗಿಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಲ್ಡೋಜರ್ಗಳು ಪ್ರಸ್ತುತ ದುರಸ್ತಿಯಲ್ಲಿದೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ದಿನ ಹೊರ ಬೀಳುತ್ತಿದ್ದಂತೆಯೇ ಅವೆಲ್ಲ ಬುಲ್ಡೋಜರ್ಗಳು ಬಳಕೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮಣಿಪುರಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಕಳೆದ ನಾಲ್ಕೂವರೆ ವರ್ಷಗಳಿಂದ ತಲೆಮರೆಸಿಕೊಂಡಿರುವ ಆದರೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಹೊರಬರುವ ಎಲ್ಲರಿಗೂ ಮಾರ್ಚ್ 10ರ ನಂತರ ಸರ್ಕಾರ ಬುಲ್ಡೋಜರ್ಗಳನ್ನು ಬಳಕೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು. ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕರು ತಮ್ಮ ಸೋಲನ್ನು ಕಾಣುವ ಮೂಲಕ ತಾಳ್ಮೆ ಕಳೆದುಕೊಂಡಿದ್ದಾರೆ. ಕೇಂದ್ರ ಸಚಿವರು ಹಾಗೂ ಬಿಜೆಪಿ ಅಭ್ಯರ್ಥಿ ಎಸ್ಪಿ ಬಘೇಲ್ರ ಮೇಲಿನ ಹಲ್ಲೆಯು ಸಮಾಜವಾದಿ ಪಕ್ಷದ ಹೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದರು. #WATCH | I have come here to assure you that I have send the bulldozer for repair. 10 March ke baad jab ye fir se chalna prarambh hoga to jin logo me abhi jyada garmi nikal rahi hai, ye garmi 10 March ke baad apne aap shant ho jayegi: UP CM Yogi Adityanath in Karhal, Mainpuri pic.twitter.com/hvjcQsKbeE — ANI UP/Uttarakhand (@ANINewsUP) February 18, 2022