alex Certify ಯುದ್ಧದಲ್ಲಿ ಪಾಲ್ಗೊಳ್ಳಲು ಹೆದರಿ ಶ್ರೀಮಂತ ಯುವಕರು ಕಟ್ಟುತ್ತಿದ್ದರು ಟ್ಯಾಕ್ಸ್‌; 12ನೇ ಶತಮಾನದಲ್ಲಿತ್ತು ಹೇಡಿತನದ ತೆರಿಗೆ ಪದ್ಧತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ಧದಲ್ಲಿ ಪಾಲ್ಗೊಳ್ಳಲು ಹೆದರಿ ಶ್ರೀಮಂತ ಯುವಕರು ಕಟ್ಟುತ್ತಿದ್ದರು ಟ್ಯಾಕ್ಸ್‌; 12ನೇ ಶತಮಾನದಲ್ಲಿತ್ತು ಹೇಡಿತನದ ತೆರಿಗೆ ಪದ್ಧತಿ….!

ತೆರಿಗೆ ಪದ್ಧತಿ ಇಂದು ನಿನ್ನೆಯದಲ್ಲ. ಬಹಳ ಪುರಾತನ ಕಾಲದಿಂದಲೂ ತೆರಿಗೆ ಸಂಗ್ರಹ ರೂಢಿಯಲ್ಲಿದೆ. ಬ್ರಿಟನ್‌ನಲ್ಲಿ ಒಂದು ರೀತಿಯ ಹೇಡಿತನದ ತೆರಿಗೆ ಪ್ರಚಲಿತದಲ್ಲಿತ್ತು. ಯುದ್ಧ ಮಾಡಲಾಗದ ಅಸಹಾಯಕರು, ಯುದ್ಧದಲ್ಲಿ ಪಾಲ್ಗೊಳ್ಳುವ ಧೈರ್ಯವಿಲ್ಲದವರು ತೆರಿಗೆಯನ್ನು ಪಾವತಿಸುತ್ತಿದ್ದರು.

12 ರಿಂದ 13 ನೇ ಶತಮಾನದವರೆಗೆ ಈ ನಿಯಮ ಜಾರಿಯಲ್ಲಿತ್ತು. ಯುದ್ಧಕ್ಕೆ ಹೆದರಿದ ಶ್ರೀಮಂತರು ಹೇಡಿತನದ ತೆರಿಗೆಯನ್ನು ಪಾವತಿಸಿ ಯುದ್ಧದಿಂದ ದೂರ ಉಳಿಯುವ ಆಯ್ಕೆಯನ್ನು ಹೊಂದಿದ್ದರು.

ಸಿರಿವಂತರು ಮತ್ತು ಸಾಮಂತರು ಯುದ್ಧದಲ್ಲಿ ಅಂಗವಿಕಲರಾಗುತ್ತೇವೆ ಎಂಬ ಭಯದಿಂದ ತೆರಿಗೆ ಕಟ್ಟುತ್ತಿದ್ದರು. ಮಧ್ಯಕಾಲೀನ ಯುಗದಲ್ಲಿ ಈ ತೆರಿಗೆಯನ್ನು ಪಾವತಿಸುವ ಮೂಲಕ ಅನೇಕರು ಯುದ್ಧದಿಂದ ದೂರ ಉಳಿಯುತ್ತಿದ್ದರು. ಈ ತೆರಿಗೆ ಪದ್ಧತಿ ಕಿಂಗ್ ಹೆನ್ರಿ I (1100-1135) ಸ್ಟೀಫನ್ (1135-1154) ರ ಆಳ್ವಿಕೆಯಲ್ಲಿ ಮುಂದುವರೆಯಿತು. ಮಧ್ಯಕಾಲೀನ ಯುಗದಲ್ಲಿ ದೇಶಗಳ ನಡುವಿನ ಯುದ್ಧವು ಸಾಮಾನ್ಯವಾಗಿತ್ತು. ಒಂದು ದೇಶ ಇತರ ದೇಶಗಳ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಳ್ಳುತ್ತಿತ್ತು. ಹಾಗಾಗಿ ಆ ದಿನಗಳಲ್ಲಿ ಪ್ರತಿಯೊಬ್ಬ ಯುವಕನೂ ಸೇನೆಗೆ ಸೇರುವುದು ಅನಿವಾರ್ಯವಾಗಿತ್ತು. ಆದರೆ ಶ್ರೀಮಂತ ಯುವಕರು ಇದಕ್ಕೂ ಪರಿಹಾರ ಕಂಡುಕೊಂಡರು.

ಈ ತೆರಿಗೆಯನ್ನು ಸ್ಕ್ಯೂಟೇಜ್ ಅಥವಾ ಶೀಲ್ಡ್ ಮನಿ ಎಂದೂ ಕರೆಯುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ ಈ ತೆರಿಗೆಯನ್ನು ಯುದ್ಧದ ದಿನಗಳಲ್ಲಿ ಮಾತ್ರವಲ್ಲ ಸಾಮಾನ್ಯ ದಿನಗಳಲ್ಲಿಯೂ ಪಾವತಿಸಬೇಕಾಗಿತ್ತು. ಆ ಹಣದಿಂದ ಯುವ ಶ್ರೀಮಂತರ ಬದಲು ಬೇರೆಯವರನ್ನು ಸೇನೆಯಲ್ಲಿ ನೇಮಿಸಿ ತರಬೇತಿ ನೀಡಬಹುದು. ಬ್ರಿಟನ್ ನಂತರ 12 ಮತ್ತು 13 ನೇ ಶತಮಾನಗಳಲ್ಲಿ, ಇತರ ದೇಶಗಳು ಸಹ ಇದನ್ನು ಅಳವಡಿಸಿಕೊಂಡವು. ಈ ತೆರಿಗೆಯನ್ನು ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಸಹ ರೂಢಿಗೆ ತರಲಾಯಿತು.

ಆದಾಯವನ್ನು ಹೆಚ್ಚಿಸಲು ಈ ತೆರಿಗೆಯನ್ನು ಬಳಸಲಾಯಿತು. ಆದರೆ ಈ ತೆರಿಗೆಯನ್ನು 14 ನೇ ಶತಮಾನದಲ್ಲಿ ನಿಷೇಧಿಸಲಾಯಿತು.  ಆ ಸಮಯದಲ್ಲಿ ಕಿಟಕಿಗಳ ಮೇಲೆ ತೆರಿಗೆ ವಿಧಿಸಲಾಯಿತು. ಇದನ್ನು 1696ರಲ್ಲಿ ಬ್ರಿಟಿಷ್ ರಾಜ ವಿಲಿಯಂ III ಪ್ರಾರಂಭಿಸಿದ್ದ. ದೊಡ್ಡ ಅರಮನೆಗಳಲ್ಲಿ ಅನೇಕ ಕಿಟಕಿಗಳಿದ್ದವು. 6 ಕಿಟಕಿಗಳ ನಂತರ ಈ ತೆರಿಗೆ ಅನ್ವಯವಾಗುತ್ತಿತ್ತು. ಈ ತೆರಿಗೆಯನ್ನು ಸಂಗ್ರಹಿಸುವುದು ಸುಲಭ, ಏಕೆಂದರೆ ಆಗ ಅಪಾರ್ಟ್‌ಮೆಂಟ್‌ಗಳು ಇರಲಿಲ್ಲ. ಪ್ರತಿ ಮನೆಗೂ ಹತ್ತಾರು ಕಿಟಕಿಗಳಿರುತ್ತಿದ್ದವು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...