alex Certify ಯುದ್ದಪೀಡಿತ ಉಕ್ರೇನ್​ ನಲ್ಲಿ ಕಳ್ಳತನ ಮಾಡಿದವನಿಗೆ ಸಿಗ್ತು ವಿಚಿತ್ರ ಶಿಕ್ಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ದಪೀಡಿತ ಉಕ್ರೇನ್​ ನಲ್ಲಿ ಕಳ್ಳತನ ಮಾಡಿದವನಿಗೆ ಸಿಗ್ತು ವಿಚಿತ್ರ ಶಿಕ್ಷೆ…!

ಉಕ್ರೇನ್​ನ ಮೇಲೆ ರಷ್ಯಾದ ಆಕ್ರಮಣಗಳ ನಡುವೆಯೇ ಕೀವ್​ನಲ್ಲಿ ಅಂಗಡಿಗಳನ್ನು ಲೂಟಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಗೆ ಶಿಕ್ಷೆಯ ರೂಪದಲ್ಲಿ ಆತನನ್ನು ಕರೆಂಟ್ ಕಂಬಕ್ಕೆ ಕಟ್ಟಿ ಆತನ ಪ್ಯಾಂಟ್​ನ್ನು ಮೊಣಕಾಲಿನವರೆಗೆ ಎಳೆಯಲಾಗಿದ್ದು ಈ ಫೊಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ರಷ್ಯಾವು ಉಕ್ರೇನ್​ನ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್​ನಲ್ಲಿ ಲೂಟಿ ಪ್ರಕರಣಗಳು ಹೆಚ್ಚುತ್ತಿದೆ. ಸೂಪರ್​ ಮಾರ್ಕೆಟ್​ಗಳು, ಪೆಟ್ರೋಲ್​ ಬಂಕ್​ಗಳು ಹಾಗೂ ಬ್ಯಾಂಕುಗಳನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗುತ್ತಿದೆ.

ಮತ್ತೊಂದು ಫೋಟೋದಲ್ಲಿ ವ್ಯಕ್ತಿಯೊಬ್ಬ ಈ ರೀತಿ ಕರೆಂಟ್​ ಕಂಬಕ್ಕೆ ಕಟ್ಟಿ ಹಾಕಲಾಗಿದ್ದ ಲೂಟಿಕೋರನೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಈಗಾಗಲೇ ಯುದ್ಧದಿಂದ ಧ್ವಂಸಗೊಂಡಿರುವ ದೇಶದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿರುವವರನ್ನು ಅವಮಾನಿಸಲು ಹಾಗೂ ಶಿಕ್ಷಿಸಲು ಉಕ್ರೇನಿಯನ್ನರು ಆಯ್ಕೆ ಮಾಡಿಕೊಂಡ ಮಾರ್ಗ ಇದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...