
ಇಂತಹ ವಿರೂಪಗಳೊಂದಿಗೆ ಜನಿಸಿದ ಪ್ರಾಣಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಸುಮಾರು 10 ವರ್ಷಗಳ ಹಿಂದೆ ಕ್ವಿಂಟೋ ಎಂಬ ಐದು ಕಾಲಿನ ಕುರಿಮರಿಯನ್ನು ಕೊನೆಯ ಬಾರಿಗೆ ನೋಡಿದ್ದ ಫಾರ್ಮ್ ನ ಮಾಲೀಕರು, ಅದರ ಹೆಚ್ಚುವರಿ ಕಾಲನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಿಹಾಕಿದ್ದರು. ನಂತರ ಕುರಿಯು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಹೊಂದಿತ್ತು.
ಇದೀಗ ಜನಿಸಿರೋ ಕುರಿಮರಿಯನ್ನೂ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಮಾಲೀಕರು ನಿರ್ಧರಿಸಿದ್ದಾರೆ. ಐದು ಕಾಲಿನ ಕುರಿಮರಿಗಳು ಅತ್ಯಂತ ವಿರಳವಾಗಿದ್ದು, ಮಿಲಿಯನ್‌ನಲ್ಲಿ ಒಂದು ಕುರಿಮರಿ ಮಾತ್ರ ಈ ರೀತಿ ಜನಿಸುತ್ತದೆ.
ಈ ವರ್ಷದ ಜನವರಿಯಲ್ಲಿ ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಕರುವೊಂದು ಮೂರು ಕಣ್ಣುಗಳೊಂದಿಗೆ ಜನಿಸಿತ್ತು. ಮೂರು ಕಣ್ಣುಗಳನ್ನು ಹೊಂದಿರುವ ಕರುವಿನ ಜನನವು ತ್ರಿನೇತ್ರ ಅಥವಾ ಮೂರು ಕಣ್ಣುಗಳನ್ನು ಹೊಂದಿರುವ ಶಿವನ ಅವತಾರವೆಂದೇ ಜನರು ನಂಬಿದ್ದರು.