
ರೋಲ್ ಮಾಡಬಹುದಾದ ಮೋಟಾರ್ ಪ್ರೊಜೆಕ್ಟರ್ ಪರದೆಯನ್ನು ಸ್ಥಾಪಿಸಲಾಗಿದ್ದು, ಇದೀಗ ವೈರಲ್ ಆಗಿದೆ. ಪ್ರೊಜೆಕ್ಟರ್ಗೆ 20-25 ಸಾವಿರ ರೂಪಾಯಿಗಳ ನಡುವೆ ವೆಚ್ಚವಾಗುತ್ತಿತ್ತು. ಆದ್ದರಿಂದ ರಂಜಿತ್ ಅವರ ಪತ್ನಿ ಸುಲಭ ಉಪಾಯ ಮಾಡಿದ್ದು, ಜನರು ಮೆಚ್ಚುಗೆ ಗಳಿಸಿದೆ.
ಅವರು ಬಿಳಿ ಬೆಡ್ ಶೀಟ್ ತೆಗೆದುಕೊಂಡು ನಾಲ್ಕು ಬದಿಗಳಲ್ಲಿ ಅವುಗಳನ್ನು ಕ್ಲಿಪ್ ಮಾಡಿದರು ಮತ್ತು ಅದರ ಮೇಲೆ ತಮಗೆ ಬೇಕಾದುದನ್ನು ನೋಡಲು ಗಂಡನಿಗೆ ಹೇಳಿದರು. ರಂಜಿತ್ ಅವರು ತಮ್ಮ ಜುಗಾಡ್ ಪ್ರೊಜೆಕ್ಟರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪತ್ನಿಯ ಸಹಾಯದಿಂದ 25 ಸಾವಿರ ರೂಪಾಯಿ ಉಳಿಸಿದೆ ಎಂದಿದ್ದಾರೆ.
ಇದು ಬಹಳ ಹಳೆಯ ಪದ್ಧತಿ, ಎಷ್ಟೋ ವರ್ಷಗಳ ಹಿಂದೆಯೇ ಜನರು ಇದನ್ನು ಬಳಕೆ ಮಾಡಿದ್ದಾರೆ, ಬಹುಶಃ ಅದನ್ನು ನೀವು ನೋಡಿರಲಿಲ್ಲ ಎಂದು ಕೆಲವರು ಹೇಳಿದ್ದರೆ, ಇನ್ನು ಹಲವರು ಪತ್ನಿಯ ತಲೆಗೆ ಭೇಷ್ ಭೇಷ್ ಎನ್ನುತ್ತಿದ್ದಾರೆ.