alex Certify ಯಾರು ಎಂದು ಕೇಳ್ತಿಯಾ ಎಂದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರು ಎಂದು ಕೇಳ್ತಿಯಾ ಎಂದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್

ನವದೆಹಲಿ: ಅಪಾರ್ಟ್​ಮೆಂಟ್​ ಒಂದಕ್ಕೆ ಹೊಸದಾಗಿ ಬಂದಿರುವಾತನ ಪರಿಚಯ ಕೇಳಿದ್ದಕ್ಕೆ ಸಿಟ್ಟುಗೊಂಡ ಆತ, ಅಲ್ಲಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಆ ವ್ಯಕ್ತಿ ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ನಡೆದಿರುವ ಗುದ್ದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆಗಿದ್ದೇನೆಂದರೆ, ರಾಜನಗರದಲ್ಲಿ ನಿರ್ಮಿಸಲಾದ ವಿಂಡ್ಸರ್ ಪ್ಯಾರಡೈಸ್ ಎಂಬ ಅಪಾರ್ಟ್​ಮೆಂಟ್​ಗೆ ಹೊಸದಾಗಿ ಕುಟುಂಬವೊಂದು ಬಂದಿದೆ. ಈ ಕುಟುಂಬದವರನ್ನು ಅಲ್ಲಿರುವ ಭದ್ರತಾ ಸಿಬ್ಬಂದಿ ಮೊದಲು ನೋಡಿರದ ಹಿನ್ನೆಲೆಯಲ್ಲಿ ಸಹಜವಾಗಿ ಗುರುತಿನ ಚೀಟಿ ಕೇಳಿದ್ದಾನೆ. ಭದ್ರತಾ ಸಿಬ್ಬಂದಿಯೊಬ್ಬ ತನ್ನ ಗುರುತಿನ ಚೀಟಿ ಕೇಳಿದ್ದಾನೆ ಎಂಬ ಕಾರಣದಿಂದ ಆ ವ್ಯಕ್ತಿಯ ಸಿಟ್ಟು ನೆತ್ತಿಗೇರಿದೆ. ತನ್ನನ್ನು ಪ್ರಶ್ನೆ ಮಾಡಲು ಈತ ಯಾರು ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ !

ಈ ರೀತಿ ಹಲ್ಲೆ ಮಾಡಿದಾಗ ಸುಮ್ಮನೆ ಇರದ ಭದ್ರತಾ ಸಿಬ್ಬಂದಿ ತಿರುಗಿ ಆತನ ಮೇಲೆ ಕೈ ಮಾಡಿದ್ದಾನೆ. ಹೀಗೆ ಇಬ್ಬರ ನಡುವೆ ಗುದ್ದಾಟ ನಡೆದಿದೆ. ಇದು ಅಲ್ಲಿರುವ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...