ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಧಿಕಾರ ಸ್ವೀಕರಿಸಿ ಎರಡು ವರ್ಷವಾದ ದಿನದಂದೇ ರಾಜೀನಾಮೆ ನೀಡಿರುವುದು ವಿಶೇಷ. ವಿಧಾನಸೌಧದಲ್ಲಿ ಮಾಡಿದ ಭಾಷಣದ ವೇಳೆ ಗದ್ಗದಿತರಾಗಿದ್ದ ಯಡಿಯೂರಪ್ಪ ಈ ಸಂದರ್ಭದಲ್ಲಿ ತಾವು ನಡೆದುಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ.
ಬಳಿಕ ಸಂಪುಟ ಸಹೋದ್ಯೋಗಿಗಳೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪನವರು ನಂತರ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪನವರ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು ಹಂಗಾಮಿಯಾಗಿ ಮುಂದುವರೆಯುವಂತೆ ಸೂಚಿಸಿದ್ದಾರೆ.
ಸಿಸಿ ಟಿವಿಯಲ್ಲಿ ಸೆರೆಯಾದ ವಿಚಿತ್ರ ನೆರಳು ಕಂಡು ಬೆಚ್ಚಿಬಿದ್ದ ಕುಟುಂಬ
ಯಡಿಯೂರಪ್ಪನವರ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ ಅವರ ಸಚಿವ ಸಂಪುಟವು ಸಹ ಬರ್ಖಾಸ್ತ್ ಆಗಿದ್ದು, ಹೀಗಾಗಿ ಎಲ್ಲ ಸಚಿವರು ಈಗ ಮಾಜಿಯಾಗಿದ್ದಾರೆ. ಅವರುಗಳಿಗೆ ನೀಡಿದ್ದ ಸರ್ಕಾರಿ ವಾಹನವನ್ನು ಈಗಾಗಲೇ ಹಿಂಪಡೆಯಲಾಗಿದೆ. ಜೊತೆಗೆ ಅವರುಗಳಿಗೆ ವಿಧಾನಸೌಧದಲ್ಲಿ ನೀಡಿದ್ದ ಕೊಠಡಿಗಳಿಗೆ ಬೀಗ ಹಾಕಲಾಗಿದೆ.