alex Certify ಮೊಳಕೆಯೊಡೆದ ಈರುಳ್ಳಿ ಅಡುಗೆಗೆ ಬಳಸಹುದಾ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಳಕೆಯೊಡೆದ ಈರುಳ್ಳಿ ಅಡುಗೆಗೆ ಬಳಸಹುದಾ…? ಇಲ್ಲಿದೆ ಮಾಹಿತಿ

ಮೊನ್ನೆಯಷ್ಟೆ ತಂದ ಈರುಳ್ಳಿಯ ತುದಿಯಲ್ಲಿ ಚಿಗುರು ಮೂಡಿದೆ, ಇನ್ನು ಬಳಸುವುದು ಹೇಗಪ್ಪಾ ಎಂದು ಎಸೆಯುವ ಮುನ್ನ ಇಲ್ಲಿ ಕೇಳಿ.

ಇದರಲ್ಲಿರುವ ತೇವಾಂಶದಿಂದಾಗಿ ಈರುಳ್ಳಿ ಮೊಳಕೆಯೊಡೆಯುತ್ತದೆ. ಈ ಸಂದರ್ಭದಲ್ಲಿ ಈರುಳ್ಳಿ ಸ್ವಲ್ಪ ಮೆದುವಾಗುತ್ತದೆ ಎಂಬುದನ್ನು ಹೊರತುಪಡಿಸಿದರೆ ಇದನ್ನು ಸೇವಿಸಲು ಯಾವುದೇ ಸಮಸ್ಯೆಗಳಿಲ್ಲ. ಹಸಿಯಾಗಿ ತಿನ್ನುವಾಗ ಕಹಿ ಎನಿಸಬಹುದು. ಹಾಗಾಗಿ ಬೇಯಿಸಿ ಮಾಡುವ ಅಡುಗೆಯಲ್ಲಿ ಇದನ್ನು ಖಂಡಿತಾ ಬಳಸಬಹುದು.

ಕುಡಿಯೊಡೆದ ಭಾಗವನ್ನು ಕತ್ತರಿಸಿ ತೆಗೆದು ಉಳಿದ ಭಾಗವನ್ನು ಬಳಸಿ. ಸಾಧ್ಯವಾದಷ್ಟು ಈ ವಸ್ತುಗಳನ್ನು ಹೆಚ್ಚು ತೇವಾಂಶವಿರುವ ಜಾಗದಲ್ಲಿ ಸಂಗ್ರಹಿಸಿಡದಿರಿ.

ಇವು ಬಹು ಬೇಗ ಕೆಡುವ ಸಾಧ್ಯತೆ ಇರುವುದರಿಂದ ನೀವು ಇದನ್ನು ತಕ್ಷಣವೇ ಬಳಸಿ. ಇದನ್ನು ಇತರ ತಾಜಾ ಹಣ್ಣು, ತರಕಾರಿಗಳ ಜೊತೆಗೂ ಇಡದಿರಿ. ನಿತ್ಯ ಈರುಳ್ಳಿ ಸೇವನೆಯಿಂದ ಹೃದಯದ ಆರೋಗ್ಯ ಮಾತ್ರವಲ್ಲ ಕಿಡ್ನಿ ಸಮಸ್ಯೆ ದೂರವಾಗಿ ಕೆಂಪು ರಕ್ತ ಕಣಗಳ ಉತ್ಪಾದನೆಯೂ ಹೆಚ್ಚುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...