alex Certify ಮೊಮ್ಮಗಳೊಂದಿಗೆ ಪದವಿ ಪಡೆದ 87 ವರ್ಷದ ವೃದ್ಧ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗಳೊಂದಿಗೆ ಪದವಿ ಪಡೆದ 87 ವರ್ಷದ ವೃದ್ಧ..!

ಶಿಕ್ಷಣ ಪಡೆಯಲು ಯಾವುದೇ ವಯಸ್ಸಿನ ಹಂಗಿಲ್ಲ. ನಿಮಗೆ ಯಾವಾಗೆಲ್ಲಾ ಕಲಿಯಬೇಕು ಅನ್ನೋ ಮನಸ್ಸಾಗುತ್ತೋ, ಕಾಲೇಜು ಮೆಟ್ಟಿಲು ಹತ್ತಬಹುದು. ಇದಕ್ಕೆ 87ರ ಇಳಿ ವಯಸ್ಸಿನಲ್ಲೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ರೆನೆ ನೀರಾ ಎಂಬುವವರು ಬೆಸ್ಟ್ ಎಕ್ಸಾಂಪಲ್.

ಇದಕ್ಕಿಂತಲೂ ಮತ್ತಷ್ಟು ಹರ್ಷದಾಯಕ ವಿಷಯವೆಂದ್ರೆ, ಅವರ ಮೊಮ್ಮಗಳು ಮೆಲಾನಿ ಸಲಾಜರ್ ಕೂಡ ಘಟಿಕೋತ್ಸವದಲ್ಲಿ ಪಾಲ್ಗೊಂಡು ಬಿಎ ಪದವಿಯನ್ನು ಪಡೆದಿದ್ದಾರೆ. ಆಕೆಗೆ ಸಮೂಹ ಸಂವಹನದಲ್ಲಿ ಬಿಎ ಪದವಿಯನ್ನು ನೀಡಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ರೆನೆ ನೀರಾ ಸಮಾರಂಭದಲ್ಲಿ ಗಾಲಿಕುರ್ಚಿಯಲ್ಲಿದ್ದರು. ಆದರೆ ಇದು ಅವರ ಉತ್ಸಾಹಕ್ಕೆ ಭಂಗ ತಂದಿಲ್ಲ.

ಈ ಸ್ಪೂರ್ತಿದಾಯಕ ಕ್ಷಣವನ್ನು ಯುಟಿಎಸ್ಎ ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್ ತನ್ನ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಇದಕ್ಕೆ ನೆಟ್ಟಿಗರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಕುಟುಂಬ ಸಮೇತ ದುಬೈಗೆ ಯಡಿಯೂರಪ್ಪ

ನೀರಾ ಅವರು 1950ರ ದಶಕದಲ್ಲಿ ಸೇಂಟ್ ಮೇರಿಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ಆದರೆ ಅವರು ಮದುವೆಯಾದ ನಂತರ ಕಾಲೇಜು ತೊರೆದಿದ್ದರು. ಅವರ ಪತ್ನಿಯ ಮರಣದ ನಂತರ, ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಅಂತಿಮವಾಗಿ 2016 ರಲ್ಲಿ ಅವರು ಯುಟಿಎಸ್ಎ ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಈ ವೇಳೆ ಅವರಿಗೆ 82 ವರ್ಷ ವಯಸ್ಸಾಗಿತ್ತು.

ಹಲವಾರು ಜನರು ತಮ್ಮ ಶಿಕ್ಷಣವನ್ನು ವೃದ್ಧಾಪ್ಯದಲ್ಲಿ ಪೂರ್ಣಗೊಳಿಸುವ ಕನಸನ್ನು ನನಸಾಗಿಸಿಕೊಂಡ ಅನೇಕ ಕಥೆಗಳು ನಮ್ಮ ಕಣ್ಣ ಮುಂದೆ ಇವೆ. 2015 ರಲ್ಲಿ, 94 ವರ್ಷದ ಯುಎಸ್ ಮೂಲದ ವೃದ್ಧರೊಬ್ಬರು ಕಾಲೇಜಿನಿಂದ ಪದವಿ ಪಡೆದರೆ, ನಿವೃತ್ತ ಪ್ರೊಫೆಸರ್ ಎಂ.ಕೆ. ಪ್ರೇಮ್, ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಅನೇಕ ಕೋರ್ಸ್‌ಗಳಿಗೆ ದಾಖಲಾಗಿದ್ದರು. ಇವುಗಳ ಬಗ್ಗೆ ಕೇಳಿದ್ರೆ, ಕೆಲವು ಜನರಿಗೆ ಜ್ಞಾನದ ಬಾಯಾರಿಕೆ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಸಾಬೀತುಪಡಿಸುತ್ತದೆ.

— UTSA (@UTSA) December 13, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...