ಹಾವೇರಿ: ಕೆಟ್ಟುಹೋಗಿದ್ದ ಮೊಬೈಲ್ ನ ಹಳೆ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಬಾಲಕನ ಕೈ ಬೆರಳುಗಳು ತುಂಡಾಗಿದ್ದು, ಮುಖಕ್ಕೂ ಗಾಯವಾಗಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.
ಹಾಳಾಗಿದ್ದ ಮೊಬೈಲ್ ಬ್ಯಾಟರಿಯನ್ನು ಮನೆ ಪಕ್ಕದಲ್ಲೇ ಬಿಸಾಕಲಾಗಿತ್ತು. 10 ವರ್ಷದ ಬಾಲಕ ಕಾರ್ತಿಕ್, ಬಿಸಾಕಿದ್ದ ಬ್ಯಾಟರಿ ಎತ್ತಿಕೊಂಡು ಆಟವಾಡಲು ತೊಡಗಿದ್ದಾನೆ. ಬ್ಯಾಟರಿ ಏಕಾಏಕಿ ಸ್ಫೋಟಗೊಂಡಿದ್ದು, ಬಾಲಕನ ಮೂರು ಬೆರಳುಗಳು ತುಂಡಾಗಿವೆ. ಮುಖಕ್ಕೂ ಗಂಭೀರವಾಗಿ ಗಾಯಗಳಾಗಿವೆ.
ಮಡದಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಶೇರ್ ಮಾಡಿಕೊಂಡ ನಿಕ್ ಜೋನಾಸ್
ಬಾಲಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.