alex Certify ಮೊಬೈಲ್ ಬ್ಯಾಟರಿ ಸ್ಫೋಟ; ಬಾಲಕನ ಬೆರಳುಗಳೇ ಕಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬ್ಯಾಟರಿ ಸ್ಫೋಟ; ಬಾಲಕನ ಬೆರಳುಗಳೇ ಕಟ್…!

ಹಾವೇರಿ: ಕೆಟ್ಟುಹೋಗಿದ್ದ ಮೊಬೈಲ್ ನ ಹಳೆ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಬಾಲಕನ ಕೈ ಬೆರಳುಗಳು ತುಂಡಾಗಿದ್ದು, ಮುಖಕ್ಕೂ ಗಾಯವಾಗಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

ಹಾಳಾಗಿದ್ದ ಮೊಬೈಲ್ ಬ್ಯಾಟರಿಯನ್ನು ಮನೆ ಪಕ್ಕದಲ್ಲೇ ಬಿಸಾಕಲಾಗಿತ್ತು. 10 ವರ್ಷದ ಬಾಲಕ ಕಾರ್ತಿಕ್, ಬಿಸಾಕಿದ್ದ ಬ್ಯಾಟರಿ ಎತ್ತಿಕೊಂಡು ಆಟವಾಡಲು ತೊಡಗಿದ್ದಾನೆ. ಬ್ಯಾಟರಿ ಏಕಾಏಕಿ ಸ್ಫೋಟಗೊಂಡಿದ್ದು, ಬಾಲಕನ ಮೂರು ಬೆರಳುಗಳು ತುಂಡಾಗಿವೆ. ಮುಖಕ್ಕೂ ಗಂಭೀರವಾಗಿ ಗಾಯಗಳಾಗಿವೆ.

ಮಡದಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ನಿಕ್ ಜೋನಾಸ್

ಬಾಲಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...