ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ.
ಇದಕ್ಕೆ ಕಾರಣ ಏನು ಎಂಬುದು ನಿಮಗೆ ಗೊತ್ತಾ? ಇದು ಕೇವಲ ಒಂದು ಪದ್ಧತಿಯಲ್ಲ. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇದೆ.
ಹಿಂದು ಧರ್ಮದಲ್ಲಿ ಹಾಲು, ಕೇಸರಿ ಹಾಗೂ ಬಾದಾಮಿಗೆ ಬಹಳ ಮಹತ್ವವಿದೆ. ಹಾಗಾಗಿ ಮದುವೆಯ ಮೊದಲ ರಾತ್ರಿ ವಧು ಕೇಸರಿ, ಬಾದಾಮಿಯುಕ್ತ ಹಾಲನ್ನು ವರನಿಗೆ ನೀಡ್ತಾಳೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ.
ಹಾಲು ಆಯಾಸವನ್ನು ಕಡಿಮೆ ಮಾಡುತ್ತದೆ. ಆಯಾಸಗೊಂಡ ನರಗಳಿಗೆ ಶಕ್ತಿ ನೀಡುತ್ತದೆ. ಹಾರ್ಮೋನುಗಳು ಏರಿಕೆಯಾಗುತ್ತದೆ. ಜೊತೆಗೆ ವಧು, ವರನಿಗೆ ಹಾಲು ನೀಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಲೈಂಗಿಕ ಆಸಕ್ತಿ ಹೆಚ್ಚಾಗುವ ಜೊತೆಗೆ ಮನಸ್ಸು ಉಲ್ಲಾಸಿತಗೊಳ್ಳುತ್ತದೆ.