alex Certify ಮೊದಲ ಬಾರಿಗೆ ʼಅಲೆಕ್ಸಾʼ ಜೊತೆ ಮಾತನಾಡಿದ 80ರ ವೃದ್ಧ; ಈ ಸಂಭಾಷಣೆ ಕೇಳಿದ್ರೆ ನಿಮಗೆ ನಗು ಬರೋದು ಖಚಿತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ʼಅಲೆಕ್ಸಾʼ ಜೊತೆ ಮಾತನಾಡಿದ 80ರ ವೃದ್ಧ; ಈ ಸಂಭಾಷಣೆ ಕೇಳಿದ್ರೆ ನಿಮಗೆ ನಗು ಬರೋದು ಖಚಿತ..!

Viral Video: Grandpa Talks to Alexa For The First Time, Their Adorable Exchange is Too Cute to Miss | watchಹೊಚ್ಚ ಹೊಸ ತಂತ್ರಜ್ಞಾನವನ್ನು ಕಂಡು ವೃದ್ಧ ವ್ಯಕ್ತಿಗಳು ಗಲಿಬಿಲಿಗೊಳ್ಳುವುದು ಸಹಜ. ಅನೇಕರಿಗೆ ಫೇಸ್ಬುಕ್, ವಾಟ್ಸಾಪ್ ಬಗ್ಗೆಯೇ ತಿಳಿದಿಲ್ಲ. ಕೆಲವೊಂದನ್ನು ಕಲಿಯಲು ಅವರು ಬಹಳ ಉತ್ಸುಕರಾಗಿರುತ್ತಾರೆ. ಇದೇಗ ಅಂಥದ್ದೇ ಆರಾಧ್ಯ ಕ್ಷಣವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ವೃದ್ಧರೊಬ್ಬರು ಅಮೆಜಾನ್ ಅಲೆಕ್ಸಾ ಜೊತೆ ಸಾಧ್ಯವಾದಷ್ಟು ಮೋಹಕವಾದ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಹೊರಬಂದಿದೆ. ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದ ಪ್ಯಾಟ್ರಿಕ್ ಕೆನ್ನಿ ಎಂಬುವವರು ಅಲೆಕ್ಸಾ ಸಾಧನದೊಂದಿಗೆ ಸಂಭಾಷಣೆಗೆ ಇಳಿದಿದ್ದಾರೆ. ಮೊದಲಿಗೆ ಪ್ರಶ್ನೆಯನ್ನು ಕೇಳಲು ಹಿಂಜರಿಯುತ್ತಾರೆ. ನಂತರ ಅಲೆಕ್ಸಾಗೆ ಸಾಸೇಜ್ ಮತ್ತು ಪೆಪ್ಪೆರೋನಿ ಪಿಜ್ಜಾಗಳ ಬಗ್ಗೆ ಕೇಳುತ್ತಾರೆ. ಅವು ಒಳ್ಳೆಯದೋ ಅಥವಾ ಇಲ್ಲವೇ ಎಂದು ಕೇಳುತ್ತಾರೆ. ಪ್ರತಿಕ್ರಿಯೆಯನ್ನು ಪಡೆಯದಿದ್ದಲ್ಲಿ, ಅವಳು ಅದನ್ನು ಕೇಳಲು ಬಯಸುವುದಿಲ್ಲ ಎಂದು ಪಿಸುಗುಟ್ಟಿದ್ದಾರೆ.

ಆದರೆ, ಸ್ವಲ್ಪ ಸಮಯದ ನಂತರ ಅಲೆಕ್ಸಾ ಶಾಪಿಂಗ್ ಪಟ್ಟಿಗೆ ಸಾಸೇಜ್ ಅನ್ನು ಸೇರಿಸುತ್ತದೆ. ಇದು ವೃದ್ಧ ವ್ಯಕ್ತಿಯನ್ನು ಗಲಿಬಿಲಿಗೊಳಿಸಿದೆ. ತಾನು ಒಳ ಉಡುಪುಗಳನ್ನು ಖರೀದಿಸಲು ಬಯಸುವುದಿಲ್ಲ, ತಾನು ಅದನ್ನು ಹೇಳಲಿಲ್ಲ ಎಂದು ಹೇಳಿದ್ದಾರೆ. 80ರ ಹರೆಯದ ಪ್ಯಾಟ್ರಿಕ್ ಕೆನ್ನಿ ಮೊದಲ ಬಾರಿಗೆ ಅಲೆಕ್ಸಾವನ್ನು ಬಳಸಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿ ಮತ್ತು ಅಲೆಕ್ಸಾ ನಡುವಿನ ಉಲ್ಲಾಸದ ಸಂಭಾಷಣೆಯನ್ನು ಜನರು ಇಷ್ಟಪಟ್ಟಿದ್ದಾರೆ. ವೃದ್ಧ ಅಲೆಕ್ಸಾ ಜೊತೆ ಮಾತನಾಡುತ್ತಿದ್ದ ಮೋಹಕವಾದ ರೀತಿಯನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗವು ಹೃದಯ ಮತ್ತು ನಗುವ ಎಮೋಜಿಗಳಿಂದ ತುಂಬಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...