
ಸಾಮಾನ್ಯವಾಗಿ ಕ್ರಿಕೆಟ್‌ನ ತವರು ಎಂದು ಹೇಳಲಾಗುವ ಲಾರ್ಡ್ಸ್ ಮೈದಾನವು ಪ್ರಾರ್ಥನೆಯ ಕರೆಗಳೊಂದಿಗೆ ಪ್ರತಿಧ್ವನಿಸಿದೆ. ಈವೆಂಟ್‌ನ ಮುಖ್ಯ ಆಯೋಜಕಿ ತಮೀನಾ ಹುಸೇನ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಸರ್ವಿಸ್ ಡೆಸ್ಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಡಳಿಯು ಈವೆಂಟ್‌ನ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋ ಹಂಚಿಕೊಂಡ ಇಸಿಬಿ, ಗುರುವಾರದಂದು ಇಸಿಬಿ ರಂಜಾನ್ ಆಚರಿಸಲು ಲಾರ್ಡ್ಸ್‌ನ ಲಾಂಗ್ ರೂಮ್‌ನಲ್ಲಿ ಇಫ್ತಾರ್ ಆಯೋಜಿಸಿದೆ ಎಂದು ಶೀರ್ಷಿಕೆ ನೀಡಲಾಗಿದೆ.
ಇಸಿಬಿಯ ಬಗ್ಗೆ ಹಲವಾರು ಮಂದಿ ಕ್ರಿಕೆಟಿಗರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮುಸ್ಲಿಂ ಸಮುದಾಯದೊಂದಿಗೆ ಮರುಸಂಪರ್ಕಿಸಲು ಮುಂದೆ ಬಂದಿದ್ದಕ್ಕಾಗಿ ಇಸಿಬಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಬಿಬಿಸಿಯ ಕ್ರಿಕೆಟ್ ನಿರೂಪಕ ಆತಿಫ್ ನವಾಜ್ ಅವರು ಅಜೀಮ್ ರಫೀಕ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಜೀಂ ಒಬ್ಬ ವೃತ್ತಿಪರ ಕ್ರಿಕೆಟಿಗ, ಇವರು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್‌ಗಾಗಿ ಆಡಿದ್ದರು.