alex Certify ಮೊಟ್ಟೆ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ…?

ಮೊಟ್ಟೆ ತಿಂದರೆ ಒಬೆಸಿಟಿ ಬರುತ್ತದೆ, ದಪ್ಪ ಆಗುತ್ತಾರೆ ಎಂದೆಲ್ಲಾ ತಪ್ಪು ಕಲ್ಪನೆ ಇದೆ. ಆದರೆ ಮೊಟ್ಟೆಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಅದರಲ್ಲೂ ಬ್ರೇಕ್‌ ಫಾಸ್ಟ್‌ಗೆ ತಿಂದರೆ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು. ಮೊಟ್ಟೆಯಲ್ಲಿ ವಿಟಮಿನ್‌ ಎ, ಡಿ, ವಿಟಮಿನ್‌ ಬಿ6, ಕಬ್ಬಿಣದಂಶ ಹಾಗೂ ವಿಟಮಿನ್‌ ಬಿ 12. ಇವೆ.

ಮೂಳೆಗಳು ಬಲವಾಗುತ್ತವೆ

ಇದರಲ್ಲಿ ವಿಟಮಿನ್‌ ಡಿ ಹಾಗೂ ಕ್ಯಾಲ್ಸಿಯಂ ಇದ್ದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ಡಯಟ್‌ನಲ್ಲಿ ಸೇರಿಸಿದರೆ ಸಂಧಿವಾತ ತಡೆಗಟ್ಟಬಹುದು.

ಹೃದಯದ ಆರೋಗ್ಯಕ್ಕೂ ಒಳ್ಳೆಯದು

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್‌ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆ ಇದೆ. ಆದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‌ ಅವಶ್ಯಕ. ಅದು ಮೊಟ್ಟೆಯಲ್ಲಿದೆ.

ಕೂದಲು ಹಾಗೂ ಉಗುರಿನ ಆರೋಗ್ಯ

ಮೊಟ್ಟೆ ತಿನ್ನುವುದರಿಂದ ಆರೋಗ್ಯಕರ ಕೂದಲು ಹಾಗೂ ಉಗುರು ಪಡೆಯಬಹುದು.

ತೂಕ ಕಮ್ಮಿ ಮಾಡುತ್ತೆ

ತೂಕ ಕಮ್ಮಿಯಾಗಬಯಸುವವರು ಡಯಟ್‌ನಲ್ಲಿ ಸೇರಿಸಬಹುದಾದ ಆರೋಗ್ಯಕರ ಫುಡ್ ಇದಾಗಿದೆ.

ಕಣ್ಣಿನ ಆರೋಗ್ಯ

ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...