ಮೇಲುಕೋಟೆಯ ಬಾಹುಬಲಿ ಎಂದೇ ಹೆಸರಾಗಿದ್ದ 75 ವರ್ಷದ ಕಾಳಮೇಘಂ ರಾಮಸ್ವಾಮಿ ಅಯ್ಯಂಗಾರ್ ಸೋಮವಾರದಂದು ವಿಧಿವಶರಾಗಿದ್ದಾರೆ.
ರಾಮಸ್ವಾಮಿ ಅಯ್ಯಂಗಾರ್ ರವರು ಯೋಗಾ ನರಸಿಂಹ ಸ್ವಾಮಿ ಬೆಟ್ಟದ ದೇವಾಲಯದಲ್ಲಿ ಅಡುಗೆ ಮನೆ ಕೈಂಕರ್ಯ ಮಾಡುತ್ತಿದ್ದರು.
ಅವರು ಭಾರಿ ಗಾತ್ರದ ಪಾತ್ರೆಯಲ್ಲಿ ಬೆಟ್ಟದ ಮಧ್ಯದ ಭಾಗದ ಬಾವಿಯಿಂದ ನೀರು ತೆಗೆದುಕೊಂಡು ನೂರಾರು ಮೆಟ್ಟಿಲುಗಳನ್ನು ಹತ್ತಿ ನರಸಿಂಹನ ಅಭಿಷೇಕ ಮತ್ತು ಪ್ರಸಾದಗಳಿಗೆ ಸೇವೆ ಸಮರ್ಪಿಸಿದ್ದರು.
ಈ ಕಾರಣಕ್ಕಾಗಿಯೇ ಅವರನ್ನು ಮೇಲುಕೋಟೆಯ ಬಾಹುಬಲಿ ಎಂದೇ ಗುರುತಿಸಲಾಗುತ್ತಿತ್ತು. ತಮ್ಮ ಸೇವಾವಧಿಯಲ್ಲಿ ಒಂದು ದಿನವೂ ಅನಾರೋಗ್ಯದಿಂದ ಮಲಗದ ಅವರು ಸೋಮವಾರ ಸೌರಮಾನ ನರಸಿಂಹ ಜಯಂತಿಯಂದೇ ವೈಕುಂಠ ವಾಸಿಯಾಗಿದ್ದಾರೆ.