alex Certify ಮೆಟ್ರೋದಲ್ಲಿ ಯುವಕನಿಗೆ ಯುವತಿಯಿಂದ ಕಪಾಳಮೋಕ್ಷ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋದಲ್ಲಿ ಯುವಕನಿಗೆ ಯುವತಿಯಿಂದ ಕಪಾಳಮೋಕ್ಷ: ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದು ಮೆಟ್ರೋದಲ್ಲಿ ಯುವಕ ಹಾಗೂ ಯುವತಿ ನಡುವೆ ಜಗಳವಾಡಿರುವ ದೃಶ್ಯವಾಗಿದೆ. ಇಬ್ಬರ ನಡುವಿನ ವಾಗ್ವಾದವು ಇತರ ಪ್ರಯಾಣಿಕರನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಗಲಾಟೆಯ ನಡುವೆ ಯುವತಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ತೀವ್ರ ವಾಗ್ವಾದದ ನಂತರ ಇಬ್ಬರೂ ಒಂದೇ ನಿಲ್ದಾಣದಲ್ಲಿ ಇಳಿದಿದ್ದಾರೆ. ಆಘಾತಕಾರಿ ವಿಡಿಯೋವನ್ನು ಮಂದರ್ ಎಂಬವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಒಂದು ಟೀ ಶರ್ಟ್ ನಿಂದಾಗಿ ಇಷ್ಟೆಲ್ಲಾ ರಾದ್ಧಾಂತವಾಗಲು ಕಾರಣವಾಯಿತು. 1000 ರೂಪಾಯಿಗೆ ಟೀ ಶರ್ಟ್ ತೆಗೆದುಕೊಂಡಿರುವುದಾಗಿ ಯುವತಿ ಹೇಳಿದ ಬಳಿಕ ವಾಗ್ವಾದ ಶುರುವಾಗಿದೆ. ಆದರೆ, ಇದಕ್ಕೊಪ್ಪದ ಯುವಕ ಅದು 1000 ರೂ.ನ ಟೀ ಶರ್ಟ್ ನಂತೆ ಕಾಣುತ್ತಿಲ್ಲ. ಅದಕ್ಕೆ 150 ರೂ.ಗಿಂತ ಹೆಚ್ಚು ಇಲ್ಲ ಎಂದು ಹೇಳುತ್ತಾನೆ. ಇದರಿಂದ ಕೋಪಗೊಂಡ ಯುವತಿ ನಿರಂತರವಾಗಿ ಆತನಿಗೆ ಒದೆ ಕೊಟ್ಟಿದ್ದಾಳೆ. ಕೊನೆಗೆ ಕಪಾಳಮೋಕ್ಷ ಕೂಡ ಮಾಡಿದ್ದಾಳೆ. ಮೆಟ್ರೋದಲ್ಲಿದ್ದ ಸಹಪ್ರಯಾಣಿಕರೆಲ್ಲರೂ ಅವರಿಬ್ಬರ ಜಗಳವನ್ನು ನೋಡುತ್ತಿದ್ದರೂ, ಯಾರೂ ಮಧ್ಯಪ್ರವೇಶಿಸಲಿಲ್ಲ.

ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಕೆಲವು ಬಳಕೆದಾರರು ಅವರು ದಂಪತಿಗಳು ಎಂದು ಹೇಳಿದ್ರೆ, ಇತರರು ಅವರು ಒಡಹುಟ್ಟಿದವರಾಗಿರಬಹುದು ಎಂದು ಅಂದಾಜಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...