ಹಾಲನ್ನು ಕುಡಿಯುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಷ್ಟೆಲ್ಲಾ ರೋಗಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಎಷ್ಟೆಲ್ಲ ಶಕ್ತಿ ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ.
ಹಸಿ ಹಾಲನ್ನು ಸೌಂದರ್ಯ ವರ್ಧಕವಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
ಮೃದುವಾದ ತ್ವಚೆ ಪಡೆಯಲು ಹಸಿ ಹಾಲನ್ನು ಕುತ್ತಿಗೆ ಮತ್ತು ಮುಖಕ್ಕೆ ಹಚ್ಚಿ. ಹತ್ತು ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ತ್ವಚೆ ನಯವಾಗುವುದು ಮಾತ್ರವಲ್ಲ ಹೊಳಪನ್ನೂ ಪಡೆದುಕೊಳ್ಳುತ್ತದೆ.
ಬಿಸಿಲಿನ ಝಳಕ್ಕೆ ಮುಖ ಬಾಡಿದ್ದರೆ, ಕಪ್ಪಗಾಗಿದ್ದರೆ ಆ ಕಲೆಯನ್ನು ನಿವಾರಿಸಲು ಹಸಿ ಹಾಲನ್ನು ಬಳಸಬಹುದು. ಹತ್ತಿ ಬಟ್ಟೆಯನ್ನು ಹಾಲಿಗೆ ಮುಳುಗಿಸಿ ಮುಖಕ್ಕೆ ಒತ್ತಿಕೊಂಡರೆ ಕಲೆ ದೂರವಾಗುತ್ತದೆ. ಇದನ್ನು ದಿನಕ್ಕೆ ಎರಡು ಬಾರಿಯಂತೆ ಮೂರು ದಿನ ಮಾಡಿ ನೋಡಿ.
ಹಸಿ ಹಾಲಿಗೆ ತುಸು ಅಕ್ಕಿ ಪುಡಿ ಹಾಕಿಕೊಂಡು ಸ್ಕ್ರಬ್ ಮಾಡಿಕೊಂಡರೆ ಮುಖದ ಕಲೆ ದೂರವಾಗುವುದರ ಜೊತೆಗೆ ಸತ್ತ ಜೀವಕೋಶಗಳೂ ಬೇರ್ಪಡುತ್ತವೆ. ಹಸಿ ಹಾಲನ್ನು ತಲೆಯ ನೆತ್ತಿಗೆ ಹಚ್ಚಿ ತೊಳೆಯುವುದರಿಂದ ಕೂದಲು ಒಣಗುವ ಸಮಸ್ಯೆ ದೂರವಾಗುತ್ತದೆ.