alex Certify ಮೂಳೆ ದುರ್ಬಲವಾಗೋದನ್ನ ತಡೆಯೋಕೆ ಅನುಸರಿಸಿ ಈ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಳೆ ದುರ್ಬಲವಾಗೋದನ್ನ ತಡೆಯೋಕೆ ಅನುಸರಿಸಿ ಈ ಕ್ರಮ

ವಯಸ್ಸಾಗ್ತಾ ಹೋದಂತೆ ಮೂಳೆಗಳಲ್ಲಿನ ಸ್ವಾಧೀನ ಕಡಿಮೆಯಾಗುತ್ತಾ ಹೋಗುತ್ತೆ. ಬಾಲ್ಯದಿಂದ ಯೌವ್ವನದವರೆಗೆ ಈ ಮೂಳೆಯ ಸಮಸ್ಯೆ ನಮ್ಮ ಗಮನೆಗೆ ಬರೋದಿಲ್ಲ. ಆದರೆ ಯಾವಾಗ ನಮ್ಮ ವಯಸ್ಸು ಮೂವತ್ತನ್ನ ದಾಟುತ್ತೋ ಒಂದೊಂದೆ ಸಮಸ್ಯೆಗಳು ಶುರುವಾಗುತ್ತಾ ಹೋಗುತ್ತೆ. ಆದರೆ ನಿಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನ ತರೋದ್ರಿಂದ ದೇಹದ ಮೂಳೆಯಲ್ಲಿನ ಶಕ್ತಿಯನ್ನ ಹೆಚ್ಚಿಸಬಹುದಾಗಿದೆ.

ಸಾಧ್ಯವಾದಷ್ಟು ತರಕಾರಿಗಳನ್ನ ಸೇವಿಸಿ : ತರಕಾರಿಗಳಲ್ಲಿ ವಿಟಾಮಿನ್​ ಸಿ ಅಂಶ ಹೆಚ್ಚಾಗಿ ಇರೋದ್ರಿಂದ ಮೂಳೆಯ ಆರೋಗ್ಯವನ್ನ ಕಾಪಾಡುತ್ತವೆ. ಅಲ್ಲದೇ ತರಕಾರಿಯಲ್ಲಿ ಸಿಗುವ ಖನಿಜಾಂಶಗಳು ಕೂಡ ಮೂಳೆಯ ಸ್ವಾಧೀನವನ್ನ ಹೆಚ್ಚಿಸಬಲ್ಲವು.

ವ್ಯಾಯಾಮ : ದೇಹವನ್ನ ದಂಡಿಸಬಲ್ಲ ಕಸರತ್ತುಗಳು ಮೂಳೆಗಳನ್ನ ಬಲಪಡಿಸಲು ಸಹಕಾರಿ. ಅಲ್ಲದೇ ಹೊಸ ಮೂಳೆಯ ರಚನೆಯನ್ನೂ ಉತ್ತೇಜಿಸುತ್ತವೆ. ದೇಹದಂಡನೆಯಿಂದಾಗಿ ಖನಿಜ ಸಾಂದ್ರತೆ ಹೆಚ್ಚಾಗೋದ್ರಿಂದ ಮೂಳೆಗಳಲ್ಲೂ ಶಕ್ತಿ ಹೆಚ್ಚುತ್ತದೆ.

ಪೋಶಕಾಂಶಯುಕ್ತ ಆಹಾರ ಸೇವನೆ : ಮೂಳೆಗಳು 50 ಪ್ರತಿಶತ ಪ್ರೋಟಿನ್​ಗಳಿಂದಲೇ ನಿರ್ಮಾಣವಾಗಿರುತ್ತವೆ. ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗೋದು ಕಡಿಮೆಯಾಗುತ್ತದೆ. ಇದರಿಂದಾಗಿ ಮೂಳೆ ಬಹುಬೇಗನೇ ತುಂಡಾಗೋದಿಲ್ಲ.

ಕ್ಯಾಲ್ಶಿಯಂಯುಕ್ತ ಆಹಾರ : ಕ್ಯಾಲ್ಶಿಯಂ ಅಂಶ ಮೂಳೆಗೆ ಬೇಕೆ ಬೇಕು. ಹೀಗಾಗಿ ಮೂಳೆಗಳ ಆರೋಗ್ಯಕ್ಕಾಗಿ ನಿತ್ಯದ ಆಹಾರ ಕ್ರಮದಲ್ಲಿ ಕ್ಯಾಲ್ಶಿಯಂಯುಕ್ತ ಪದಾರ್ಥವನ್ನ ಸೇವಿಸಲೇಬೇಕು. ಕ್ಯಾಲ್ಶಿಯಂ ಮಾತ್ರೆಗಳನ್ನ ಸೇವಿಸೋದಕ್ಕಿಂತ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಸಿಗುವ ಕ್ಯಾಲ್ಶಿಯಂ ಅಂಶ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ವಿಟಾಮಿನ್​ ಡಿ : ವಿಟಾಮಿನ್​ ಡಿ ದೇಹದಲ್ಲಿ ಕ್ಯಾಲ್ಶಿಯಂ ಅಂಶವನ್ನ ಹೆಚ್ಚಿಗೆ ಮಾಡಲು ಸಹಕಾರಿ. ಯಾವ ಮಕ್ಕಳು ಹಾಗೂ ವಯಸ್ಕರ ದೇಹದಲ್ಲಿ ವಿಟಾಮಿನ್​ ಡಿ ಅಂಶ ಹೇರಳವಾಗಿ ಇರುತ್ತದೋ ಅಂತವರ ಮೂಳೆಗಳು ದುರ್ಬಲವಾಗಿ ಇರೋದು ಅತೀ ವಿರಳ . ಮೀನು ಹಾಗೂ ಮಾಂಸಗಳಲ್ಲಿ ನಿಮಗೆ ವಿಟಾಮಿನ್​ ಡಿ ಅಂಶ ಹೆಚ್ಚಾಗಿ ಸಿಗುತ್ತೆ.

ಕ್ಯಾಲರಿಯುಕ್ತ ಆಹಾರವನ್ನ ಸಂಪೂರ್ಣವಾಗಿ ತ್ಯಜಿಸದಿರಿ : ತೂಕ ಕಡಿಮೆ ಮಾಡಬೇಕು ಅಂತಾ ಬಹಳಷ್ಟು ಮಂದಿ ಕ್ಯಾಲರಿಯುಕ್ತ ಆಹಾರವನ್ನ ಸೇವಿಸೋದೇ ಇಲ್ಲ. ಆದರೆ ಬಲಶಾಲಿ ಮೂಳೆಗಳನ್ನ ಪಡೆಯಬೇಕು ಅಂದರೆ ಪ್ರೋಟಿನ್​, ವಿಟಮಿನ್​ಗಳಿರುವ ಆಹಾರ ಸೇವಿಸಬೇಕು. ಹೀಗಾಗಿ ನಿತ್ಯ 1200 ಕ್ಯಾಲರಿಯುಕ್ತ ಆಹಾರ ದೇಹಕ್ಕೆ ಹೋಗಲೇಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...