alex Certify ‘ಮೂನ್ ಲೈಟಿಂಗ್’ ಬಯಲಾಗಿದ್ದರ ಹಿಂದಿದೆಯಂತೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೂನ್ ಲೈಟಿಂಗ್’ ಬಯಲಾಗಿದ್ದರ ಹಿಂದಿದೆಯಂತೆ ಈ ಕಾರಣ

Moonlighting Divides IT Industry: As Wipro Fires 300 Employees, Here's Who  Said Whatಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುವುದನ್ನು ‘ಮೂನ್ ಲೈಟಿಂಗ್’ ಎಂದು ಹೇಳುತ್ತಾರೆ. ಕೊರೊನಾ ಕಾರಣಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿರುವ ಹಲವು ಟೆಕ್ಕಿಗಳು ಈ ರೀತಿ ಎರಡೆರಡು ಕಂಪನಿಗಳಲ್ಲಿ ಕೆಲಸ ಮಾಡಿ ವೇತನ ಪಡೆಯುತ್ತಿರುವ ವಿಷಯ ಇತ್ತೀಚೆಗೆ ಬಹಿರಂಗವಾಗಿತ್ತು.

ಹೀಗಾಗಿ ವಿಪ್ರೋ, ಇನ್ಫೋಸಿಸ್ ಸೇರಿದಂತೆ ಹಲವು ಕಂಪನಿಗಳು ಮೂನ್ ಲೈಟಿಂಗ್ ನಲ್ಲಿ ತೊಡಗಿರುವ ತನ್ನ ಉದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಲ್ಲದೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದವು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ವಿಪ್ರೋ 300ಕ್ಕೂ ಅಧಿಕ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.

ಇದೀಗ ಕಂಪನಿಗಳಿಗೆ ಮೂನ್ ಲೈಟಿಂಗ್ ವಿಷಯ ತಿಳಿದದ್ದು ಹೇಗೆ ಎಂಬುದರ ವಿವರವನ್ನು ರಾಜೀವ್ ಮೆಥಾ ಎಂಬವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ ಖಾತೆ ತೆರೆಯಲು ಆಧಾರ್ ನಂಬರ್, ಪಾನ್ ನಂಬರ್ ನಮೂದಿಸಿರುತ್ತಾರೆ. ಆದರೆ ಕಳೆದ ಕೆಲವು ತಿಂಗಳಿಂದ ಮೂನ್ ಲೈಟಿಂಗ್ ನಲ್ಲಿ ತೊಡಗಿದ್ದ ಉದ್ಯೋಗಿಗಳ ಖಾತೆಗೆ ಹಲವು ಬಾರಿ ಪಿಎಫ್ ಹಣ ಜಮೆಯಾಗಿರುವುದು ಅಧಿಕಾರಿಗಳಿಗೆ ಕಣ್ಣಿಗೆ ಬಿದ್ದಿದೆ.

ಹೀಗಾಗಿ ಅನುಮಾನಗೊಂಡ ಪಿಎಫ್ ಅಧಿಕಾರಿಗಳು ವಿಪ್ರೋ ಕಂಪನಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಕೂಲಂಕುಶವಾಗಿ ವಿಚಾರ ಮಾಡಿದಾಗ ತಾವು ಈ ಮೊದಲೇ ಉದ್ಯೋಗದಲ್ಲಿದ್ದ ಕಂಪನಿಯಿಂದಲೂ ಪಿಎಫ್ ಹಣ ಪಡೆದುಕೊಂಡಿದ್ದ ಉದ್ಯೋಗಿಗಳಿಗೆ, ಇದರ ಮಧ್ಯೆ ತಾವು ಕೆಲಸ ಮಾಡುತ್ತಿದ್ದ ಮತ್ತೊಂದು ಕಂಪನಿಯಿಂದಲೂ ಪಿಎಫ್ ಹಣ ಜಮೆಯಾಗಿತ್ತು ಎನ್ನಲಾಗಿದೆ. ಇದು ಬೆಳಕಿಗೆ ಬಂದ ನಂತರ ಮೂನ್ ಲೈಟಿಂಗ್ ಬಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...