ನಿಮ್ಮ ಹಲ್ಲು ಮುತ್ತಿನಂತೆ ಹೊಳೆಯಬೇಕು ಎಂದು ನೀವು ಬಯಸುತ್ತೀರಲ್ಲವೇ. ಪೇಸ್ಟ್ ಹಾಕಿ ಎಷ್ಟು ತಿಕ್ಕಿದರೂ ಅದು ಬೆಳ್ಳಗಾಗುತ್ತಿಲ್ಲವೇ, ಹಾಗಿದ್ದರೆ ಕೆಲವು ಮನೆಮದ್ದುಗಳನ್ನು ಮಾಡಿ ನೋಡಿ.
ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಇಲ್ಲಿ ಕೇಳಿ. ಪ್ರತಿದಿನ ಬಾಳೆಹಣ್ಣು ತಿಂದು ಸಿಪ್ಪೆ ಎಸೆಯುವ ಮುನ್ನ ಅದನ್ನು ನಿಮ್ಮ ಹಲ್ಲಿನ ಮೇಲೆ ಒಂದೆರಡು ನಿಮಿಷ ಉಜ್ಜಿ. ಇದರಲ್ಲಿರುವ ಪೊಟ್ಯಾಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನೀಷಿಯಮ್ ಗಳನ್ನು ನಿಮ್ಮ ಹಲ್ಲುಗಳು ಹೀರಿಕೊಳ್ಳಲು ಬಿಡಿ.
ಬಾಳೆಹಣ್ಣಿನ ಸಿಪ್ಪೆಯಂತೆ ಕಿತ್ತಳೆ ಹಣ್ಣಿನ ಸಿಪ್ಪೆ ಸಹ ನಿಮ್ಮ ಹಲ್ಲನ್ನು ಬಿಳಿ ಮಾಡುತ್ತವೆ. ಸ್ಟ್ರಾಬೆರಿ ಹಣ್ಣನ್ನು ನುಣ್ಣಗೆ ರುಬ್ಬಿ ಬ್ರಶ್ ರೀತಿಯಲ್ಲಿ ಹಲ್ಲನ್ನು ತಿಕ್ಕಿ. ಇದನ್ನು ಎರಡರಿಂದ ಮೂರು ನಿಮಿಷ ಬಾಯಲ್ಲಿಟ್ಟುಕೊಂಡರೆ ಸಾಕು, ನಿಮ್ಮ ಹಲ್ಲಿಗೆ ನೈಸರ್ಗಿಕ ಹೊಳಪು ದೊರೆಯುತ್ತದೆ.
ಕ್ಯಾರೆಟ್ ಅನ್ನು ಸ್ವಚ್ಛವಾಗಿ ತೊಳೆದು ಕಚ್ಚಿ ತಿನ್ನಿ. ಇದು ನಿಮ್ಮ ಹಲ್ಲಿನ ಪ್ಲೇಕ್ ಗಳನ್ನು ಕಿತ್ತು ಹಾಕಿ ಹಲ್ಲಿಗೆ ನ್ಯಾಚುರಲ್ ಕಲರ್ ನೀಡುತ್ತವೆ. ತುಂಬಾ ಬಿಸಿಯಾಗಿರುವ ಅಥವಾ ತೀರಾ ತಣ್ಣಗಿರುವ ಕಾಫಿ ಅಥವಾ ಜ್ಯೂಸ್ ಕುಡಿಯುವಾಗ ಸ್ಟ್ರಾ ಬಳಸಿ ಕುಡಿಯಿರಿ. ಇದು ನಿಮ್ಮ ಹಲ್ಲು ನೇರವಾಗಿ ಬಿಸಿ – ತಂಪಿನ ಸಂಪರ್ಕವಾಗುವುದನ್ನು ತಡೆಯುತ್ತದೆ.