ಹುರುಳಿಕಾಳು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಲಾಭವಿದೆ. ಆವಾಗವಾಗ ಹುರುಳಿಕಾಳಿನ ರಸಂ ಮನೆಯಲ್ಲಿ ಮಾಡಿಕೊಂಡು ಸವಿಯುವುದರಿಂದ ಕೆಮ್ಮು, ಕಫದಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಹುರುಳಿಕಾಳಿನ ಸೇವನೆಯಿಂದ ಋತುಸ್ರಾವದ ಸಮಸ್ಯೆ ಕಡಿಮೆಯಾಗುತ್ತದೆ. ಇಂದು ರುಚಿಕರವಾದ ಹುರುಳಿಕಾಳಿನ ರಸಂ ಮಾಡುವ ವಿಧಾನ ತಿಳಿಯೋಣ.
ಹುರುಳಿಕಾಳು-1/2 ಕಪ್ ರಾತ್ರಿಯಿಡೀ ನೆನೆಸಿದ್ದು, ಸಣ್ಣ ಲಿಂಬೆಹಣ್ಣಿನ ಗಾತ್ರದ ಹುಣಸೇ ಹಣ್ಣು-ನೀರಿನಲ್ಲಿ ನೆನೆಸಿಡಿ. ಟೊಮೆಟೊ-2 , ಕರಿಬೇವು-5 ಎಸಳು, ಉಪ್ಪು ರುಚಿಗೆ ತಕ್ಕಷ್ಟು, ಕಾಳಮೆಣಸು-1 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಬೆಳ್ಳುಳ್ಳಿ-3 ಎಸಳು, ಎಣ್ಣೆ-1 ಟೀ ಸ್ಪೂನ್ , ಸಾಸಿವೆ-3/4 ಟೀ ಸ್ಪೂನ್, ಕೆಂಪು ಮೆಣಸಿನಕಾಯಿ-1, ಕೊತ್ತಂಬರಿಪೊಪ್ಪು-ಸ್ವಲ್ಪ.
ಮೊದಲು ಒಂದು ಕುಕ್ಕರ್ ನೆನೆಸಿಟ್ಟುಕೊಂಡ ಹುರುಳಿಕಾಳು ಹಾಕಿ 3 ಕಪ್ ನೀರು ಹಾಕಿ 4 ವಿಷಲ್ ಕೂಗಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಕಾಳುಮೆಣಸು, ಬೆಳ್ಳುಳ್ಳಿ, ಜೀರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಮಿಕ್ಸಿಗೆ ಜಾರಿಗೆ 1 ಟೇಬಲ್ ಸ್ಪೂನ್ ನಷ್ಟು ಹುರುಳಿಕಾಳು ಸೇರಿಸಿ ನಯವಾಗಿರುಬ್ಬಿಕೊಳ್ಳಿ. ನಂತರ ಕುಕ್ಕರ್ ನಲ್ಲಿದ್ದ ಹುರುಳಿಕಾಳನ್ನು ಸೋಸಿಕೊಳ್ಳಿ.
ನಂತರ ಒಂದು ಪಾತ್ರೆಗೆ ಹುಣಸೆಹಣ್ಣಿನ ರಸ ಹಾಕಿ ಅದಕ್ಕೆ ರುಬ್ಬಿಕೊಂಡ ಮಿಶ್ರಣ, ಅರಿಶಿನ ಪುಡಿ, ಕರಿಬೇವು, ಟೊಮೆಟೊ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ. ನಂತರ ಸೋಸಿಟ್ಟುಕೊಂಡ ನೀರು ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಸಾಸಿವೆ ಒಣಮೆಣಸಿನ ಒಗ್ಗರಣೆ ಹಾಕಿ ಕೊತ್ತಂಬರಿಸೊಪ್ಪು ಹಾಕಿದರೆ ರುಚಿಕರವಾದ ಹುರುಳಿಕಾಳಿನ ರಸಂ ಸವಿಯಲು ಸಿದ್ಧ.