alex Certify ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವವಾದ್ರೆ ನಿರ್ಲಕ್ಷಿಸಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವವಾದ್ರೆ ನಿರ್ಲಕ್ಷಿಸಬೇಡಿ

ಅನೇಕ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಅತಿ ನೋವು ಹಾಗೂ ಹೆಚ್ಚಿನ ರಕ್ತಸ್ರಾವಕ್ಕೆ ಒಳಗಾಗ್ತಾರೆ. ಪ್ರತಿ ಗಂಟೆಗೊಮ್ಮೆ ಪ್ಯಾಡ್ ಬದಲಿಸುತ್ತಿರುತ್ತಾರೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ.

ಮೆನೊರ್ಹೇಜಿಯಾದಿಂದ ಬಳಲುವವರಿಗೆ ಇಡೀ ದಿನ ಹೊಟ್ಟೆ ನೋವು ಕಾಡುತ್ತದೆ. ನೋವಿನಿಂದ ಕೆಲಸ ಮಾಡುವುದು ತೊಂದರೆಯಾಗುತ್ತದೆ. ರಕ್ತಸ್ರಾವದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬರುತ್ತದೆ. 7 ದಿನಗಳವರೆಗೆ ರಕ್ತಸ್ರಾವವಾಗುತ್ತದೆ. ಆಯಾಸ ಕಾಡುತ್ತದೆ. ಉಸಿರಾಟ ಸಮಸ್ಯೆ ಕಾಡುತ್ತದೆ.

ಮೆನೊರ್ಹೇಜಿಯಾ ರಕ್ತಹೀನತೆ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಉಸಿರಾಟದಲ್ಲಿ ತೊಂದರೆಯಾಗುತ್ತದೆ. ಪ್ರತಿ ತಿಂಗಳು ಮಹಿಳೆಯರ ಗರ್ಭಾಶಯದಲ್ಲಿ ಒಂದು ಪದರವು ರೂಪುಗೊಳ್ಳುತ್ತದೆ. ಇದು ಮುಟ್ಟಿನ  ರಕ್ತಸ್ರಾವದ ಮೂಲಕ ದೇಹದಿಂದ ಹೊರ ಬರುತ್ತದೆ. ಹಾರ್ಮೋನುಗಳ ಮಟ್ಟವು ಹದಗೆಟ್ಟಾಗ, ಈ ಪದರವು ತುಂಬಾ ದಪ್ಪವಾಗುವುದರಿಂದ ಹೆಚ್ಚಿನ ರಕ್ತಸ್ರಾವ ಉಂಟಾಗುತ್ತದೆ. ಅಂಡೋತ್ಪತ್ತಿ ಮಾಡದಿದ್ದಲ್ಲಿ, ದೇಹದಲ್ಲಿನ ಹಾರ್ಮೋನುಗಳ ಸಮತೋಲನವು ಕ್ಷೀಣಿಸುತ್ತದೆ. ಇದು ಭಾರೀ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ಮೂತ್ರದಲ್ಲಿನ ಫೈಬ್ರಾಯ್ಡ್ ಗಡ್ಡೆಗಳಿಂದಾಗಿ ಸಹ ದೀರ್ಘಕಾಲದವರೆಗೆ ಭಾರೀ ರಕ್ತಸ್ರಾವವಾಗುತ್ತದೆ. ಫಲವತ್ತಾದ ಎಗ್ಸ್ ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸಿದಾಗ ಹಲವು ಸಮಸ್ಯೆ ಕಾಡುತ್ತದೆ. ಇದರಲ್ಲಿ, ಭಾರೀ ರಕ್ತಸ್ರಾವವಾಗುತ್ತದೆ. ಗರ್ಭಾಶಯ ಅಥವಾ ಅಂಡಾಶಯದ ಕ್ಯಾನ್ಸರ್ ಕೂಡ ಕೆಲವು ಮಹಿಳೆಯರಲ್ಲಿ ಸಾಕಷ್ಟು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಅನೇಕ ಮಹಿಳೆಯರು ದೀರ್ಘ ಕಾಲದಿಂದ ತೆಗೆದುಕೊಳ್ಳುವ ಔಷಧಿಗಳು ಕೂಡ ರಕ್ತಸ್ರಾವ ಹೆಚ್ಚಾಗಲು ಕಾರಣವಾಗುತ್ತದೆ.

ಇದಕ್ಕೆ ಚಿಕಿತ್ಸೆಯಿದೆ. ಸೂಕ್ತ ಪರೀಕ್ಷೆ ನಂತ್ರ ವೈದ್ಯರು ಯಾವ ಚಿಕಿತ್ಸೆ ನೀಡಬೇಕೆಂದು ನಿರ್ಧರಿಸುತ್ತಾರೆ. ಮಾತ್ರೆ ಸೇವನೆಯಿಂದಲೇ ಕೆಲವರಿಗೆ ಕಡಿಮೆಯಾಗಬಹುದು. ಮತ್ತೆ ಕೆಲವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಗರ್ಭಕಂಠ ಸ್ವಚ್ಛಗೊಳಿಸುವ ಮೂಲಕವೂ ಇದನ್ನು ಕಡಿಮೆ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...