alex Certify ಮುಖದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಫಾಲೋ ಮಾಡಿ ಈ ಟಿಪ್ಸ್

ಧೂಳು, ಮಾಲಿನ್ಯ, ಸೂರ್ಯನ ಕಿರಣಗಳಿಂದ ಚರ್ಮ ಬೇಗ ಸುಕ್ಕುಗಟ್ಟುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡದಿದ್ದರೆ ವಯಸ್ಸಾಗುವ ಮೊದಲೇ ನಿಮ್ಮ ಚರ್ಮ ಸುಕ್ಕುಗಟ್ಟುತ್ತದೆ. ಹಾಗಾಗಿ ಈ ಸುಕ್ಕುಗಳ ಸಮಸ್ಯೆ ನಿವಾರಿಸಲು ಈ ಟಿಪ್ ಗಳನ್ನು ಫಾಲೋ ಮಾಡಿ.

ಹಸಿ ಹಾಲಿನಿಂದ ಮುಖವನ್ನು ಕ್ಲೀನ್ ಮಾಡಿ. ಮತ್ತು ಜೇನುತುಪ್ಪ ಮತ್ತು ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವು ಸುಧಾರಿಸುತ್ತದೆ.

ಹಾಗೇ ಮೂಲಂಗಿ ರಸ ತೆಗೆದು ಅದಕ್ಕೆ ಬೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ. 1 ಗಂಟೆಯ ಬಳಿಕ ತಣ್ಣೀರಿನಲ್ಲಿ ಮುಖವನ್ನು ವಾಶ್ ಮಾಡಿ.

ಕಿತ್ತಳೆ ಸಿಪ್ಪೆಯನ್ನು ರಾತ್ರಿಯಿಡಿ ಬೆಚ್ಚಗಿನ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಆ ನೀರಿನಿಂದ ಮುಖವನ್ನು ತೊಳೆಯಿರಿ. ಇದು ಮುಖದ ಮೇಲೆ ಸಂಕೋಚನವನ್ನು ಉಂಟುಮಾಡುತ್ತದೆ.

2 ಚಮಚ ಶ್ರೀಗಂಧದ ಪುಡಿ, 2 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ಕಿತ್ತಳೆ ಪುಡಿ, ಒಂದು ಮೊಟ್ಟೆ ಮತ್ತು 4 ಹನಿ ನಿಂಬೆ ರಸ ಬೆರೆಸಿ ಮಿಕ್ಸ್ ಮಾಡಿ ಮೊದಲು ಮುಖಕ್ಕೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ ಬಳಿಕ ಈ ಪ್ಯಾಕ್ ಹಚ್ಚಿ 20 ನಿಮಿಷ ಬಿಟ್ಟು ಮುಖ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...