ಹಾಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದೊ ಹಾಗೆ ಸೌಂದರ್ಯಕ್ಕೂ ಅಷ್ಟೇ ಒಳ್ಳೆಯದು.
ಆಗಾಗ ಅದನ್ನು ಉಪಯೋಗಿಸಿ ಚರ್ಮ ರಕ್ಷಣೆ ಮಾಡಿಕೊಂಡರೆ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು. ಹೇಗೆ ಅಂತೀರಾ. ಈ ಟಿಪ್ಸ್ ಫಾಲೋ ಮಾಡಿ.
* ಬಹಳಷ್ಟು ಮಂದಿ ಸನ್ ಸ್ಕ್ರೀನ್ ಲೋಶನ್ ಬಳಸುವುದಿಲ್ಲ. ಹೀಗಾಗಿ ಅವರ ತ್ವಚೆ ಕಪ್ಪು ಅಥವಾ ಕೆಂಪಾಗಿ ಬದಲಾಗಿರುತ್ತದೆ. ಈ ಸಮಸ್ಯೆಗೆ ಹಾಲಿನ ಮಾಸ್ಕ್ ಹಚ್ಚಿಕೊಳ್ಳಬೇಕು. ಶುದ್ಧವಾದ ಬಿಳಿ ಅಥವಾ ತೆಳುವಾದ ಕಾಟನ್ ಬಟ್ಟೆಯನ್ನು ಮುಖದ ಮೇಲೆ ಇಟ್ಟು 5 ನಿಮಿಷಗಳವರೆಗೆ ಒತ್ತಿಟ್ಟುಕೊಳ್ಳಬೇಕು. ಇದರಿಂದ ತ್ವಚೆ ಕ್ಲೀನ್ ಆಗುವುದಲ್ಲದೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
* ಪಪ್ಪಾಯ ಮತ್ತು ಹಾಲಿನ ಮಿಶ್ರಣವನ್ನು ಮುಖಕ್ಕೆ ಪ್ಯಾಕ್ ರೀತಿ ಹಚ್ಚಬೇಕು. ಈ ರೀತಿ ಯಾವಾಗಲೂ ಮಾಡುತ್ತಿದ್ದರೆ, ಮುಖದ ಮೇಲಿನ ಕಪ್ಪು ಕಲೆಗಳು ಹೋಗುವುದಲ್ಲದೆ, ಮುಖವು ಕಾಂತಿಯುತವಾಗಿ ಬದಲಾಗುತ್ತದೆ.
* ಹಾಲಿನಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಮುಖವನ್ನು ಒರೆಸಿ ಕೊಳ್ಳಬಹುದು. ಇದರಿಂದ ಚರ್ಮದಲ್ಲಿನ ಮೇಕಪ್ ಹಾಗೂ ಧೂಳು ಕೂಡ ಹೊರಹೋಗುತ್ತದೆ.
* ಎರಡು ಮೂರು ಚಮಚ ಹಾಲಿಗೆ ಸ್ವಲ್ಪ ದಾಳಿಂಬೆ ಬೀಜಗಳನ್ನು ಹಾಕಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ತುಟಿಗೆ ಹಚ್ಚಿದರೆ ಕಪ್ಪು ಬಣ್ಣ ಕಡಿಮೆಯಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗೇ ಮೃದುವಾಗಿ ಬದಲಾಗುತ್ತದೆ.