alex Certify ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಮನೆ ಮದ್ದು

ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸುಂದರವಾಗಿ ಕಾಣಬೇಕು ಎಂಬ ಬಯಕೆಯಿರುತ್ತದೆ. ಹೀಗಾಗಿ ಹೆಚ್ಚಿನವರು ಕಾಸ್ಮೆಟಿಕ್ ಗಳಿಗೆ ಮೊರೆ ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವಂತಹ ಸೌಂದರ್ಯ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳಿಂದ ಉತ್ಪಾದನೆ ಮಾಡಲಾಗುತ್ತದೆ. ಇದರ ನಿರಂತರ ಬಳಕೆಯಿಂದ ಮುಖದ ಮೇಲೆ ಹಾಗೂ ಆರೋಗ್ಯದ ಮೇಲೂ ಪರಿಣಾಮ ಉಂಟಾಗಬಹುದು.

ಅದಕ್ಕೆಂದೇ ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಿದಂತಹ ಉತ್ಪನ್ನಗಳಿಂದ ಸುಲಭವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ ಕೆಲವು ದಿನಗಳಲ್ಲೇ ಫಲಿತಾಂಶ ಸಿಗುವುದರಲ್ಲಿ ಅಚ್ಚರಿಯಿಲ್ಲ.

ಸಂಜೆ ಬಿಸಿಬಿಸಿ ಟೀ ಜೊತೆ ಸೇವಿಸಿ ಮಸಾಲಾ ಪಾಪಡ್

ತೆಂಗಿನೆಣ್ಣೆ:

ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ತೆಂಗಿನೆಣ್ಣೆಯನ್ನು ಅಪಾರ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ. ಇಂಥ ಪರಿಶುದ್ಧ ತೆಂಗಿನೆಣ್ಣೆಯು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಎಣ್ಣೆಯಿಂದ ಸ್ಕಿನ್ ಮಾಯಿಸ್ಚರೈಸ್ ಮಾಡಿಕೊಳ್ಳಬಹುದು. ಒಣ ಚರ್ಮ ಸಮಸ್ಯೆ ಇದ್ದವರು ತೆಂಗಿನಎಣ್ಣೆಯನ್ನೇ ಉಪಯೋಗಿಸಿದರೆ ಒಳಿತು. ಇದು ಚರ್ಮದ ಮೃದುತ್ವವನ್ನು ಹೆಚ್ಚು ಮಾಡುವುದರ ಜೊತೆಗೆ ಮೊಡವೆ ಕಲೆಗಳನ್ನು ಹೋಗಲಾಡಿಸುತ್ತದೆ. ಇದನ್ನು ಸನ್ ಸ್ಕ್ರೀನ್ ಲೋಷನ್ ತರಹವೂ ಉಪಯೋಗಿಸಬಹುದು.

ಅಲೋವೆಲಾ:

ಮುಖದ ಕಾಂತಿ ಹೆಚ್ಚಿಸಲು ಅಲೋವೆರಾ ಕೂಡ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಲೋವೆರಾ ಜೆಲ್‌ ಗೆ ಸ್ವಲ್ಪ ರೋಸ್ ವಾಟರ್ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ದೂರವಾಗುತ್ತದೆ. ಮುಖದಲ್ಲಿ ಎಣ್ಣೆ ಅಂಶವನ್ನು ತೆಗೆದು ಹಾಕುತ್ತದೆ. ಅಲೋವೆರಾ ಜೆಲ್ ಗೆ ಎರಡು ಹನಿ ಜೇನುತುಪ್ಪ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮುಕ್ಕಾಲು ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು.

ಗ್ರೀನ್ ಟೀ:

ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಗ್ರೀನ್ ಟೀ ಕೂಡ ಒಂದು. ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಗ್ರೀನ್ ಟೀ ಫೇಸ್ ಪ್ಯಾಕ್ ನಿಯಮಿತ ಬಳಕೆಯಿಂದ ಮೊಡವೆಯಂತಹ ಸಮಸ್ಯೆಗಳನ್ನು ದೂರ ಮಾಡಬಹುದು. ಕಣ್ಣುಗಳ ಸುತ್ತಲಿರುವ ಕಪ್ಪು ವರ್ತುಲವನ್ನು ನಿವಾರಿಸಿ ಕೊಲಜನ್ ಪೂರೈಕೆ ಮಾಡುತ್ತದೆ.

ನಿಂಬೆ:

ಹೆಣ್ಣುಮಕ್ಕಳ ಸೌಂದರ್ಯ ಹೆಚ್ಚಿಸುವಲ್ಲಿ ನಿಂಬೆಹಣ್ಣಿನ ಪಾತ್ರ ಕೂಡ ದೊಡ್ಡದು. ನಿಂಬೆಹಣ್ಣಿನ ಒಣಗಿದ ಸಿಪ್ಪೆಯನ್ನು ಪುಡಿ ಮಾಡಿ ಅದರ ಚೂರ್ಣವನ್ನು ಮುಖಕ್ಕೆ ಲೇಪಿಸಿದರೆ ಮುಖದ ಕಾಂತಿ ಹೆಚ್ಚುತ್ತದೆ. ನಿಂಬೆರಸದ ಜೊತೆಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿದರೆ ಮುಖದಲ್ಲಿನ ಕಲೆಗಳು ಮಾಯವಾಗುತ್ತದೆ.

ಅರಶಿನ:

ಸಾಂಬಾರು ಪದಾರ್ಥಗಳಿಗೆ ಮಾತ್ರವಲ್ಲ ಮುಖದ ಹೊಳಪಿಗೂ ಅರಶಿನ ಸಹಕಾರಿ. ಅರಶಿನಕ್ಕೆ ಸಮ ಪ್ರಮಾಣದಲ್ಲಿ ಕಡಲೇಹಿಟ್ಟು, ಹಸಿ ಹಾಲು ಬೆರೆಸಿ ಮುಖಕ್ಕೆ ಲೇಪಿಸಿ, ಸ್ವಲ್ಪ ಸಮಯದ ಬಳಿಕ ನೀರಿನಲ್ಲಿ ತೊಳೆದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಅರಶಿನಕ್ಕೆ ಶ್ರೀಗಂಧವನ್ನೂ ಸೇರಿಸಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುವುದು.

ಸೌತೆಕಾಯಿ:

ರಾತ್ರಿ ಮಲಗುವ ಮುನ್ನ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿ. ಇದರಿಂದ ತ್ವಚೆಯ ನೀರಿನ ಮಟ್ಟವನ್ನು ಹೆಚ್ಚಳ ಮಾಡಿ, ಉರಿ ಕಡಿಮೆ ಮಾಡುತ್ತದೆ. ಕಣ್ಣು ಉರಿಯುತ್ತಿದ್ದಲ್ಲಿ ಕಟ್ ಮಾಡಿದ ಸೌತೆಕಾಯಿಯನ್ನು ಕಣ್ಣಿಗೆ ಇಟ್ಟುಬಿಡಿ. ಇದರಿಂದ ಕಣ್ಣಿಗೆ ತಂಪಿನ ಅನುಭವ ನೀಡುತ್ತದೆ. ಸೌತೆಕಾಯಿ ಹಾಗೂ ಮೊಸರಿನ ಫೇಸ್ ಪ್ಯಾಕ್ ಕೂಡ ಒಣ ಚರ್ಮಕ್ಕೆ ಅತ್ಯುತ್ತಮ ಪೋಷಣೆಯಾಗಿದೆ. ಸೌತೆಕಾಯಿಯನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಅಲೋವೆರಾ ಜೆಲ್ ಮಿಶ್ರಣ ಮಾಡಿದರೆ ಹೊಳೆಯುವ ಮುಖದ ಕಾಂತಿ ನಿಮ್ಮದಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...