alex Certify ಮುಂದೆ ನಡೆಯುವ ಘಟನೆ ಬಗ್ಗೆ ಮುನ್ಸೂಚನೆ ನೀಡುತ್ತಾ ಈ ‘ಕನಸು’…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದೆ ನಡೆಯುವ ಘಟನೆ ಬಗ್ಗೆ ಮುನ್ಸೂಚನೆ ನೀಡುತ್ತಾ ಈ ‘ಕನಸು’…..?

Dreams about death: what they mean and how to interpret them

ಮುಂದೆ ನಡೆಯುವ ಘಟನೆಗಳಿಗೆ ಕನಸು ಮುನ್ಸೂಚನೆ ಎನ್ನಲಾಗುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಕನಸುಗಳನ್ನು ಸಂಕೇತಗಳಾಗಿ ಬಳಸಿಕೊಂಡಿರುವ ಉಲ್ಲೇಖಗಳಿವೆ.

ದಶರಥನ ಮರಣದ ವೇಳೆ ಶ್ರೀರಾಮ ಕೆಟ್ಟ ಕನಸನ್ನು ಕಂಡು, ಅರಮನೆಯಲ್ಲಿ ಅಶುಭ ನಡೆದಿದೆ ಎಂದು ಅಂದಾಜಿಸಿದ್ದನಂತೆ. ರಾವಣನಿಗೂ ಸಾಯುವ ಮುನ್ಸೂಚನೆ ಕನಸಿನ ಮೂಲಕ ಸಿಕ್ಕಿತ್ತಂತೆ. ಯಾವ ರೀತಿಯ ಕನಸುಗಳು ಸಾವಿನ ಮುನ್ಸೂಚನೆ ನೀಡುತ್ತವೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

ಕನಸಿನಲ್ಲಿ ಕಾಗೆ ಕಂಡರೆ ಅಶುಭವೆಂದು ಹೇಳಲಾಗುತ್ತದೆ. ಇದು ಸಾವಿಗೆ ಹತ್ತಿರವಾಗುತ್ತಿರುವ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಪ್ರವಾಸಕ್ಕೆ ಹೋದಂತೆ ಕನಸು ಕಾಣುವುದು ಒಳ್ಳೆಯದಲ್ಲ. ಯಾವ ರಾತ್ರಿ ನೀವು ಪ್ರವಾಸಕ್ಕೆ ಹೋದ ಹಾಗೆ ಕನಸು ಕಾಣುತ್ತದೆಯೋ ಅಂದು ಪ್ರಯಾಣ ಮಾಡುವುದು ಒಳಿತಲ್ಲ.

ಕನಸಿನಲ್ಲಿ ತಮಟೆ, ಡೋಲು ಬಾರಿಸಿದಂತೆ ಕಂಡರೂ ಅದು ಅಶುಭ.

ಕೇಶ ಮುಂಡನ ಮಾಡಿದಂತೆ ಕನಸಿನಲ್ಲಿ ಕಂಡರೆ ನಿಮ್ಮ ಕುಟುಂಬದ ಸದಸ್ಯರಲ್ಲೊಬ್ಬರಿಗೆ ಸಾವು ಹತ್ತಿರ ಬಂದಿದೆ ಎಂದರ್ಥ.

ಕನಸಿನಲ್ಲಿ ಮಹಿಳೆ ಬಾಡಿದ ಹೂ ಮುಡಿದಂತೆ ಕಂಡರೆ ಅದನ್ನು ಕೆಟ್ಟ ಕನಸೆಂದು ಪರಿಗಣಿಸಲಾಗುತ್ತದೆ.

ಮಹಿಳೆ ಬಿಳಿ ವಸ್ತ್ರ ಧರಿಸಿ, ಕೂದಲನ್ನು ಬಿಟ್ಟುಕೊಂಡಿದ್ದರೆ ಅದು ವಿಯೋಗದ ಲಕ್ಷಣ ಎನ್ನಲಾಗುತ್ತದೆ.

ದೇವಿಯ ಮುರಿದ ವಿಗ್ರಹ ಕನಸಿನಲ್ಲಿ ಕಂಡರೆ ಅದನ್ನು ಅಶುಭವೆನ್ನಲಾಗುತ್ತದೆ.

ಮರ ಮುರಿದು ಬಿದ್ದಂತೆ ಅಥವ ಮೇಲಿನಿಂದ ಬಿದ್ದಂತೆ ಕನಸಿನಲ್ಲಿ ಕಂಡರೆ ಅದು ಒಳ್ಳೆಯ ಶಕುನವಲ್ಲ.

ಪದೇ ಪದೇ ಸಾವು ಮತ್ತು ಸ್ಮಶಾನ ಕಾಣ್ತಾ ಇದ್ದರೆ ಸಾವು ಹತ್ತಿರವಿದೆ ಎನ್ನಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...