ಮುಂಬೈ: ಗಡಿ ವಿಚಾರದ ಬೆನ್ನಲ್ಲೇ ಇದೀಗ ಭಾಷೆ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕ್ಯಾತೆ ತೆಗೆದಿದ್ದು, ಕನ್ನಡ ಪ್ರಾಬಲ್ಯವಿರುವ ಗಡಿ ಭಾಗದಲ್ಲಿನ ಗ್ರಾಮಗಳಲ್ಲಿ ಮರಾಠಿ ಪ್ರಚಾರ ನಡೆಸುವಂತೆ ಆದೇಶ ನೀಡಿದ್ದಾರೆ.
ಗಡಿ ಭಾಗದಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕನ್ನಡ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಮರಾಠಿ ಭಾಷೆಯ ಪ್ರಚಾರ ಮಾಡಬೇಕು. ಶೇ.50 ರಷ್ಟು ಮರಾಠಿ ಮಾತನಾಡುವಂತಾಗಬೇಕು ಎಂದು ಪತ್ರದ ಮೂಲಕ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಅಪಾರ್ಟ್ಮೆಂಟ್ ಮಾರಾಟಕ್ಕೆ ಮುಂದಾದ ಅಮೆರಿಕ ಉಪಾಧ್ಯಕ್ಷೆ ಕಮಲಾ
ಜತ್, ಅಕ್ಕಲಕೋಟ ಹಾಗೂ ದಕ್ಷಿಣ ಸೋಲಾಪುರ ತಾಲೂಕಿನ ಕನ್ನಡಿಗರ ಮೇಲೆ ಮರಾಠಿ ಭಾಷೆ ಹೇರುವ ಮೂಲಕ ಠಾಕ್ರೆ ಸರ್ಕಾರ, ಕನ್ನಡ ಭಾಷೆ ತುಳಿಯಲು ಮುಂದಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.