alex Certify ‘ಮುಂದಿನ ದಿನಗಳಲ್ಲಿ ಪಂಜಾಬ್​ನಲ್ಲಿ ಸಿಧು ಸರ್ಕಾರ’: ಸಂಚಲನ ಮೂಡಿಸಿದ ಫೇಸ್ ​ಬುಕ್​ ಪೋಸ್ಟ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮುಂದಿನ ದಿನಗಳಲ್ಲಿ ಪಂಜಾಬ್​ನಲ್ಲಿ ಸಿಧು ಸರ್ಕಾರ’: ಸಂಚಲನ ಮೂಡಿಸಿದ ಫೇಸ್ ​ಬುಕ್​ ಪೋಸ್ಟ್​​

ನವಜೋತ್​ ಸಿಂಗ್​ ಸಿಧು ಅವರ ತಂಡ ನಿರ್ವಹಿಸುತ್ತಿರುವ ಫೇಸ್​ಬುಕ್​ ಪೇಜ್​​ನಲ್ಲಿ ಪಂಜಾಬ್​ಗೆ ಮುಂದಿನ ದಿನಗಳಲ್ಲಿ ಸಿಧು ಸರ್ಕಾರ ಸಿಗಲಿದೆ ಎಂಬ ಪೋಸ್ಟ್​ನ್ನು ಶೇರ್​ ಮಾಡಲಾಗಿದೆ.

ಜಿತೇಗಾ ಪಂಜಾಬ್​( ಗೆಲ್ಲಲಿದೆ ಪಂಜಾಬ್​) ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷರನ್ನು ಸ್ವಚ್ಛ ಭಾವದ ವ್ಯಕ್ತಿ ಎಂದು ಬಣ್ಣಿಸಲಾಗಿದೆ. ಸಿಧು ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗ ರಾಜ್ಯವನ್ನು ಗೆಲ್ಲುತ್ತದೆ ಎಂದು ಬರೆದುಕೊಳ್ಳಲಾಗಿದೆ.

ಶಾಸಕರನ್ನು ಆಯ್ಕೆ ಮಾಡುವ ಪಂಜಾಬ್​ ಜನರು ತಮ್ಮ ಮುಖ್ಯಮಂತ್ರಿಯೂ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಹೈಕಮಾಂಡ್​ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಸಿಧು ಹೇಳಿಕೆ ನೀಡಿದ ಬಳಿಕ ಈ ಪೋಸ್ಟ್​ ಕೂಡ ಮಾಡಲಾಗಿದೆ.

ಪಂಜಾಬ್​ನ ಕಾಂಗ್ರೆಸ್​ ಸಿಎಂ ಅಭ್ಯರ್ಥಿ ಯಾರು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಧು, ಪಂಜಾಬ್​ನ ಜನರು ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಹೈಕಮಾಂಡ್​ ಸಿಎಂ ಆಯ್ಕೆ ಮಾಡುತ್ತೆ ಎಂದು ಹೇಳಿದವರು ಯಾರು ಎಂದು ಹೇಳಿದ್ದರು.

ಕಾಂಗ್ರೆಸ್​ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಪಂಜಾಬ್​ ಸಿಎಂ ಚರಣ್​ಜಿತ್​ ಸಿಂಗ್​ ಚನ್ನಿ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...