alex Certify ಮೀಸಲಾತಿ ಪ್ರಮಾಣ ಹೆಚ್ಚಿಸಿದ್ರೂ ಸಿಗದ ಜಯ; ಒಂದೇ ಒಂದು ST ಮೀಸಲು ಕ್ಷೇತ್ರ ಗೆಲ್ಲದ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀಸಲಾತಿ ಪ್ರಮಾಣ ಹೆಚ್ಚಿಸಿದ್ರೂ ಸಿಗದ ಜಯ; ಒಂದೇ ಒಂದು ST ಮೀಸಲು ಕ್ಷೇತ್ರ ಗೆಲ್ಲದ ಬಿಜೆಪಿ

ಬಿಜೆಪಿ ಸರ್ಕಾರವು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿತ್ತು. ಇದು ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ವರದಾನವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಪರಿಶಿಷ್ಟ ಪಂಗಡದ ಸಮುದಾಯಗಳ ಮೀಸಲಾತಿಯನ್ನು 3% ರಿಂದ 7% ಕ್ಕೆ ಹೆಚ್ಚಿಸಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಒಂದೇ ಒಂದು ಪರಿಶಿಷ್ಠ ಪಂಗಡ ಮೀಸಲು ಸ್ಥಾನವನ್ನು ಗಳಿಸಲು ವಿಫಲವಾಗಿದೆ.

2018 ರ ಚುನಾವಣೆಯಲ್ಲಿ 21 ಮೀಸಲು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 11 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ಅವಧಿಯಲ್ಲಿ ಪಕ್ಷ ಪ್ರತಿನಿಧಿಸಿದ್ದ ಆರು ಸ್ಥಾನಗಳನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಯಿತು. ಸಾರಿಗೆ ಸಚಿವ ಬಿ. ಶ್ರೀರಾಮುಲು ಮತ್ತು ಕುಡಚಿ ಶಾಸಕ ಪಿ ರಾಜೀವ್ ಕೂಡ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಕರ್ನಾಟಕವು 51 ಮೀಸಲು ಸ್ಥಾನಗಳನ್ನು ಹೊಂದಿದ್ದು ಅದರಲ್ಲಿ 15 ಎಸ್‌ಟಿ ಅಭ್ಯರ್ಥಿಗಳಿಗೆ ಮತ್ತು 36 ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲಾಗಿದೆ.

ಬಂಜಾರ, ಭೋವಿ ಮತ್ತು ಲಂಬಾಣಿಗಳು ಮತ್ತು ಇತರರು ಒಳ ಮೀಸಲಾತಿ ನೀತಿಯನ್ನು ಜಾರಿಗೆ ತರುವ ಬಿಜೆಪಿಯ ನಿರ್ಧಾರದಿಂದ ಅತೃಪ್ತರಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ.

ಹೆಚ್ಚಿನ ಮೀಸಲು ಕ್ಷೇತ್ರಗಳಲ್ಲಿ ಪ್ರಭಾವಿಯಾಗಿರುವ ಲಿಂಗಾಯತರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ತನ್ನ ಲಿಂಗಾಯತ ನಾಯಕರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅವರ ಅಸಮಾಧಾನವು ಇಲ್ಲಿ ಗೋಚರವಾಗಿದೆ.

ಕಾಂಗ್ರೆಸ್ 22 ಎಸ್‌ಸಿ ಮೀಸಲು ಸ್ಥಾನ ಮತ್ತು 14 ಎಸ್‌ಟಿ ಸ್ಥಾನಗಳನ್ನು ಪಡೆದುಕೊಂಡಿದೆ. ಕಳೆದ ಅವಧಿಯಲ್ಲಿ ಪಕ್ಷ 21 ಮೀಸಲು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ವರ್ಷ ಅವರು ತಮ್ಮ ಸಂಖ್ಯೆಯನ್ನು 36 ಸ್ಥಾನಗಳಿಗೆ ಹೆಚ್ಚಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...