ಸಾಮಾಜಿಕ ಜಾಲತಾಣದಲ್ಲಿ ಐದು ವರ್ಷಗಳ ಹಿಂದೆ ಮಾಡಲಾಗಿದ್ದ ಪೋಸ್ಟ್ ಒಂದು ಆನ್ಲೈನ್ ಫ್ಯಾಶನ್ ರೀಟೇಲರ್ ಮಿಂತ್ರಾಗೆ ಮತ್ತೊಮ್ಮೆ ಕಂಟಕ ತಂದಿದೆ. ಹಿಂದೂ ವಿರೋಧಿ ಕಂಟೆಂಟ್ ಅನ್ನು ಖುದ್ದು ಮಿಂತ್ರಾ ಪೋಸ್ಟ್ ಮಾಡದೇ ಇದ್ದರೂ ಸಹ ಟ್ವಿಟರ್ ಬಳಕೆದಾರರು ’ಮಿಂತ್ರಾ ಬಹಿಷ್ಕರಿಸಿ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಆಗಸ್ಟ್ 2016ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಈ ಹಿಂದೂ ವಿರೋಧಿ ಪೋಸ್ಟರ್ ಈಗ ಸುದ್ದಿಯಲ್ಲಿದೆ. ಸ್ಕ್ರೋಲ್ ಡ್ರೋಲ್ ಏಜೆನ್ಸಿ ಮಿಂತ್ರಾಗೆ ಜಾಹೀರಾತು ಸೃಷ್ಟಿಸಿದೆ. ಈ ಜಾಹೀರಾತಿನಲ್ಲಿ ದ್ರೌಪದಿ ವಸ್ತ್ರಹರಣದ ದೃಶ್ಯವನ್ನು ತಂದು, ಆ ವೇಳೆ ದ್ರೌಪದಿ ’ಹೆಚ್ಚು ಉದ್ದವಿರುವ’ ಸೀರೆಗಾಗಿ ಮಿಂತ್ರಾ ಅಪ್ಲಿಕೇಶನ್ ಶೋಧಿಸುತ್ತಿರುವುದನ್ನು ತೋರಲಾಗಿದೆ.
ಪರ್ಫೆಕ್ಟ್ ʼಬೇಕರ್ʼ ನೀವಾಗಬೇಕಾ…? ಹಾಗಿದ್ದರೆ ಈ ಟ್ರಿಕ್ಸ್ ಬಳಸಿ
ಈ ಜಾಹೀರಾತು ದೇಶವಾಸಿಗಳಿಗೆ ಬೇಸರ ತಂದು, ಅದೊಂದು ಹಿಂದೂ-ವಿರೋಧಿ ಪೋಸ್ಟರ್ ಎಂದು ಅಸಹನೆ ವ್ಯಕ್ತವಾಗಿತ್ತು.
ಈ ಜಾಹೀರಾತನ್ನು ಮೂರನೇ ಪಾರ್ಟಿ ಸೃಷ್ಟಿಸಿರುವುದಾಗಿ ಹೇಳಿದ್ದ ಮಿಂತ್ರಾ, ತನ್ನ ಅನುಮತಿಯೇ ಇಲ್ಲದಂತೆ ಹಾಗೆ ಮಾಡಿರುವ ಕಾರಣ ಅವರ ವಿರುದ್ಧ ನ್ಯಾಯಾಂಗ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿತ್ತು. ಅದಕ್ಕಾಗಿ ಮಿಂತ್ರಾ ಕ್ಷಮೆಯನ್ನೂ ಯಾಚಿಸಿ, ಆ ಜಾಹೀರಾತನ್ನು ಹಿಂಪಡೆದಿದ್ದಾಗಿಯೂ ತಿಳಿಸಿತ್ತು.
ಆದರೆ #BoycottMyntra ಹಾಗೂ #UninstallMyntraಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟ್ರೆಂಡ್ ಆಗುತ್ತಿದ್ದು ಐದು ವರ್ಷಗಳ ಬಳಿಕವೂ ನೆಟ್ಟಿಗರು ಈ ಬಗ್ಗೆ ಕಿಡಿಕಾರುತ್ತಿದ್ದಾರೆ.