alex Certify ಮಾಸ್ಕ್ ಇಲ್ಲ……ಸಾಮಾಜಿಕ ಅಂತರವಂತೂ ಇಲ್ವೇ ಇಲ್ಲ….! ಇದು ವಿಮಾನವೋ….ಪಬ್ಬೋ ನೀವೇ ಹೇಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಇಲ್ಲ……ಸಾಮಾಜಿಕ ಅಂತರವಂತೂ ಇಲ್ವೇ ಇಲ್ಲ….! ಇದು ವಿಮಾನವೋ….ಪಬ್ಬೋ ನೀವೇ ಹೇಳಿ

ಯಾವುದಾದ್ರೂ ಈವೆಂಟ್ ಗಳಲ್ಲಿ, ಪಬ್ ಗಳಲ್ಲಿ ಮುಂತಾದೆಡೆ ಯುವಜನತೆ ಪಾರ್ಟಿ ಮಾಡುವುದು, ಮೋಜು-ಮಸ್ತಿಯಲ್ಲಿ ತೊಡಗುವುದು ಸರ್ವೇ ಸಾಮಾನ್ಯ. ಆದರೆ, ಎಂದಾದ್ರೂ ವಿಮಾನದಲ್ಲಿ ಪಾರ್ಟಿ ಮಾಡುತ್ತಿರುವವರ ಬಗ್ಗೆ ಕೇಳಿದ್ದೀರಾ..? ಇಲ್ಲದಿದ್ದಲ್ಲಿ ಈ ಸ್ಟೋರಿ ಓದಿ.

ಹೌದು, ಮುಖಗವಸು ಧರಿಸದೆ ಕೆಲ ಯುವಕ-ಯುವತಿಯರು ದೊಡ್ಡ ಗುಂಪಾಗಿ ವಿಮಾನದಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪತ್ರಕರ್ತ ಫ್ರಾನ್ಸಿಸ್ ಪಿಲೋನ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ,  ಪ್ರಭಾವಿಗಳು ವಾಣಿಜ್ಯ ವಿಮಾನದಲ್ಲಿ ಮದ್ಯಪಾನ ಮಾಡುವುದು, ಸ್ಟೀಮ್ ಮಾಡುವುದು ಸೇರಿದಂತೆ ಪಾರ್ಟಿ ಮಾಡಿದ್ದಾರೆ. ಅಚ್ಚರಿ ಎಂದರೆ ಯಾರೊಬ್ಬರೂ ಕೂಡ ಮಾಸ್ಕ್ ಧರಿಸಿರಲಿಲ್ಲ.

ಕೆನಡಾದ ಮಾಂಟ್ರಿಯಲ್‌ನಿಂದ ಮೆಕ್ಸಿಕೊದ ಕ್ಯಾನ್‌ಕುನ್‌ಗೆ ಹಾರುತ್ತಿದ್ದ ಸನ್‌ವಿಂಗ್ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಒಬ್ಬ ವ್ಯಕ್ತಿಯನ್ನು ಸಹ ಪ್ರಯಾಣಿಕರು ಎತ್ತಿಕೊಂಡು ಹೋಗುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಇನ್ನೊಬ್ಬಾಕೆ ಭವಿಷ್ಯದ ಪೈಲೆಟ್ ಆಗಿದ್ದು, ಈಕೆ ಬಾಯಿಯಿಂದ ಹೊಗೆ ಬಿಡುತ್ತಿರುವ (ಧೂಮಪಾನ) ವಿಡಿಯೋ ವೈರಲ್ ಆಗಿದೆ. ಈ ಯುವತಿ ಲಚುಟ್ ಏವಿಯೇಷನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಕೆನಡಾ ಸರ್ಕಾರದ ಅಧಿಕಾರಿಯೊಬ್ಬರು ಘಟನೆಯ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಸಾಮಾಜಿಕ ವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಕ್ಕಾಗಿ ಪಾರ್ಟಿ ಮಾಡಿದ ಗುಂಪಿನ ವಿರುದ್ಧ ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ.

— Francis Pilon (@FrancisPilon_) January 6, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...