alex Certify ಮಾಲೀಕನ ತಾಯಿಯನ್ನೇ ಕೊಂದು ಹಣ ದೋಚಿದ ಕಿರಾತಕ ಅರೆಸ್ಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕನ ತಾಯಿಯನ್ನೇ ಕೊಂದು ಹಣ ದೋಚಿದ ಕಿರಾತಕ ಅರೆಸ್ಟ್​..!

72 ವರ್ಷದ ವೃದ್ಧೆಯ ಕತ್ತು ಹಿಸುಕಿ ಕೊಂದು ಮನೆಯಲ್ಲಿ 20 ಸಾವಿರ ರೂಪಾಯಿ ಹಣವನ್ನು ಕದ್ದು ದೋಚಿ ಪರಾರಿಯಾಗಿದ್ದ 18 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಮುಲ್ತಾನ್​ ನಗರದಲ್ಲಿ ಈ ಪ್ರಕರಣ ವರದಿಯಾದ ಕೇವಲ ನಾಲ್ಕು ಗಂಟೆಗಳಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಯುವಕನನ್ನು ಪೊಲೀಸರು ಮಧ್ಯಪ್ರದೇಶದ ಸಾಗರ್​ ನಿವಾಸಿ ರೋಹಿತ್​ ದುಬೆ ಎಂದು ಗುರುತಿಸಿದ್ದಾರೆ. ಈತ ವೃದ್ಧೆಯ ಪುತ್ರನಿಗೆ ಸೇರಿದ್ದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಬುಧವಾರ ನಸುಕಿನ ಜಾವ 1 ಗಂಟೆ ಸುಮಾರಿಗೆ ಪಶ್ಚಿಮ ವಿಹಾರ್​ನಲ್ಲಿರುವ ಬಾಲಾಜಿ ಆ್ಯಕ್ಷನ್​​ ಆಸ್ಪತ್ರೆಯಿಂದ ಪೊಲೀಸರು ಸರೋಜ್ ಜೈನ್​​ ಎಂಬ ವೃದ್ಧೆ ಕತ್ತು ಹಿಸುಕಿ ಕೊಲೆಯಾಗಿರುವ ಮಾಹಿತಿಯನ್ನು ಪಡೆದಿದ್ದಾರೆ. ಪೊಲೀಸರು ವೃದ್ಧೆಯ ಪುತ್ರ ತನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಹೇಳಿದ್ದಾರೆ.  ಇದಾದ ಬಳಿಕ ಪೊಲೀಸರು ಮನೀಶ್​ ಜೈನ್​ನನ್ನು ವಿಚಾರಣೆ ನಡೆಸಿದ್ದಾರೆ. ಆಗ ಅವರಿಗೆ ಘಟನೆಯ ಬಗ್ಗೆ ಮಾಹಿತಿ ತಿಳಿದಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಡಿಸಿಪಿ ಪರ್ವೀಂದರ್​ ಸಿಂಗ್​, ರೋಹಿತ್​ ದುಬೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಂಗಡಿಗೆ ನಾನೇ ಮಾಲೀಕನಾಗಿದ್ದೆ ಎಂದು ಮನೀಶ್​ ಜೈನ್​ ಹೇಳಿದ್ದಾರೆ. ಬುಧವಾರದಂದು ಮನೀಷ್​ ತಾಯಿ ಒಬ್ಬರೇ ಮನೆಯಲ್ಲಿ ಇದ್ದ ವೇಳೆಯಲ್ಲಿ ದುಬೆ ಮುಲ್ತಾನ್​ ನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದಾನೆ. ಮನೆಗೆ ನುಗ್ಗಿ 20 ಸಾವಿರ ರೂಪಾಯಿ ಕಳುವು ಮಾಡಿದ್ದಾನೆ. ಇದನ್ನು ಗಮನಿಸಿದ ಸರೋಜ್,​​ ದುಬೆಯನ್ನು ತಡೆಯಲು ಯತ್ನಿಸಿದಾಗ ಆತ ಕತ್ತು ಹಿಸುಕಿ ವೃದ್ಧೆಯ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...