ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ತಮ್ಮ ಮುಂಬರುವ ಮಧ್ಯಮ ಗಾತ್ರದ ಎಸ್ಯುವಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾಗಾಗಿ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.
ಆಸಕ್ತ ಖರೀದಿದಾರರು ಆರಂಭಿಕ ಮೊತ್ತ ರೂ. 11,000 ಪಾವತಿಸಿ ಹೊಸ ಎಸ್ಯುವಿಯನ್ನು ಬುಕ್ ಮಾಡಬಹುದು. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್ ಮತ್ತು ಇತರ ವಿಭಾಗದಲ್ಲಿ ಸ್ಪಧಿರ್ಸಲಿದೆ. ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಜುಲೈ 20 ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.
ಮುಂಬರುವ ಎಸ್ಯುವಿಯ ಉತ್ಪಾದನೆಯು ಆಗಸ್ಟ್ನಲ್ಲಿ ಪ್ರಾರಂಭವಾಗಲಿದೆ ಮತ್ತು ಈ ಕಾರು ಹಬ್ಬದ ಋತುವಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಈ ತಿಂಗಳ ಆರಂಭದಲ್ಲಿ ಅನಾವರಣಗೊಂಡ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್ಯುವಿಯ ಸುಜುಕಿಯಂತೆ ತೋರುತ್ತದೆ.
ಟೊಯೊಟಾ ಮತ್ತು ಸುಜುಕಿ ನಡುವಿನ ಜಾಗತಿಕ ಸಹಯೋಗದ ಒಪ್ಪಂದದ ಪ್ರಕಾರ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಎಸ್ಯುವಿಯನ್ನು ಟೊಯೊಟಾ ಕಿಲೋರ್ಸ್ಕರ್ ಮೋಟಾರ್ಸ್ ಕರ್ನಾಟಕ ಮೂಲದ ಘಟಕದಲ್ಲಿ ಉತ್ಪಾದಿಸಲಾಗುವುದು.
ಈ ಮಾದರಿಯು ಭಾರತೀಯ ಪರಿಸ್ಥಿತಿಗಳಿಗೆ ಸೂಕ್ತವಾಗಿರುತ್ತದೆ ಮತ್ತು ಪೆಟ್ರೋಲ್ ಪವರ್ಟ್ರೇನ್ಗೆ ಸಂಯೋಜಿತವಾದ ಹೈಬ್ರಿಡ್ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಪ್ರಮುಖವಾಗಿ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿರುವ ಕಂಪನಿ ಅಂಕಿಅಂಶಗಳನ್ನು ಪ್ರಸ್ತುತಪಡಿಸಿಲ್ಲ.