ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯು ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಕಳೆದ ವರ್ಷದ ಮಾರಾಟದಲ್ಲಿ ಇದು ಬಿಂಬಿತವಾಗಿದೆ.
2021-22ರಲ್ಲಿ ಮಾರುತಿ ಸುಜುಕಿ ಒಟ್ಟಾರೆ ವ್ಯಾಪಾರದಲ್ಲಿ ಗ್ರಾಮೀಣ ಪ್ರದೇಶದಿಂದಲೇ ಶೇಕಡ 43.6 ರಷ್ಟು ಬೇಡಿಕೆ ಬಂದಿತ್ತು. 2020-21 ರಲ್ಲಿ ಈ ಪ್ರಮಾಣ ಶೇಕಡಾ 40.9 ರಷ್ಟಿತ್ತು.
ಗ್ರಾಮೀಣ ಪ್ರದೇಶದಲ್ಲಿ ಮಾರುತಿ ಕಾರುಗಳ ಬೇಡಿಕೆ ಹೆಚ್ಚಳವಾಗಲು ಉತ್ತಮ ಮುಂಗಾರು ಮಳೆ ಜೊತೆಗೆ ಬೆಳೆಗಳಿಗೆ ಬೆಲೆ ಲಭಿಸಿರುವುದೂ ಕಾರಣವೆನ್ನಲಾಗಿದ್ದು, ಮಾರುತಿ ಉತ್ಪನ್ನಗಳಾದ ಆಲ್ಟೊ, ಸ್ವಿಫ್ಟ್, ವ್ಯಾಗನಾರ್ ಕಾರುಗಳಿಗೆ ಬೇಡಿಕೆ ಬರುತ್ತಿದೆ.