alex Certify ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತೆ ಒತ್ತಡದ ಸಮಸ್ಯೆ; ಇಲ್ಲಿದೆ ಒತ್ತಡ ನಿವಾರಣೆಗೆ ಆಯುರ್ವೇದದ ಪರಿಹಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತೆ ಒತ್ತಡದ ಸಮಸ್ಯೆ; ಇಲ್ಲಿದೆ ಒತ್ತಡ ನಿವಾರಣೆಗೆ ಆಯುರ್ವೇದದ ಪರಿಹಾರ…..!

ಇತ್ತೀಚಿನ ದಿನಗಳಲ್ಲಿ ಒತ್ತಡ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಜನರು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಆಯುರ್ವೇದ ಪರಿಹಾರಗಳತ್ತ ಮುಖ ಮಾಡುತ್ತಿದ್ದಾರೆ. ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಒಟ್ಟಾರೆ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸಲು ನೈಸರ್ಗಿಕ ಪರಿಹಾರಗಳನ್ನು ಬಳಸುತ್ತದೆ.ಕೆಲವು ಆಯುರ್ವೇದ ಗಿಡಮೂಲಿಕೆಗಳು, ತೈಲಗಳು ಮತ್ತು ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಧ್ಯಾನ, ಪ್ರಾಣಾಯಾಮ ಮತ್ತು ಯೋಗದಂತಹ ವಿಶ್ರಾಂತಿಯ ಮೂಲಕವೂ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇವು ನಮ್ಮ ದೇಹ, ಮನಸ್ಸು ಮತ್ತು ಆತ್ಮದಲ್ಲಿ ಸಮತೋಲನವನ್ನು ಸೃಷ್ಟಿಸುತ್ತವೆ. ಆದ್ದರಿಂದ ಒತ್ತಡವನ್ನು ಎದುರಿಸಲು ಆಯುರ್ವೇದ ಪರಿಹಾರಗಳನ್ನು ಬಳಸುವುದು ತುಂಬಾ ಪ್ರಯೋಜನಕಾರಿಯಾಗಿದೆ.  

ಅಶ್ವಗಂಧಈ ಸಸ್ಯವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಶ್ವಗಂಧದ ಬೇರನ್ನು ಪುಡಿ ಮಾಡಿ ಬಿಸಿನೀರಿನೊಂದಿಗೆ ಸೇವಿಸಬಹುದು.

ಬ್ರಾಹ್ಮಿಬ್ರಾಹ್ಮಿ ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಒತ್ತಡದ ಸಮಸ್ಯೆ ಇರುವವರು ಬ್ರಾಹ್ಮಿ ಟೀ ಮಾಡಿ ಕುಡಿಯಬಹುದು.

ಯೋಗ ಮತ್ತು ಪ್ರಾಣಾಯಾಮಯೋಗ ಮತ್ತು ಪ್ರಾಣಾಯಾಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯೋಗದ ವಿವಿಧ ಆಸನಗಳು   ನಮ್ಮ ದೇಹ ಮತ್ತು ಮನಸ್ಸನ್ನು ರಿಲ್ಯಾಕ್ಸ್‌ ಮಾಡುತ್ತವೆ. ಪ್ರಾಣಾಯಾಮವು ಮಾನಸಿಕ ಶಾಂತಿಯನ್ನು ನೀಡುತ್ತದೆ.

ಸಾಸಿವೆ ಎಣ್ಣೆಸಾಸಿವೆ ಎಣ್ಣೆಯು ದೇಹದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಹೊಕ್ಕುಳಿಗೆ ಹಚ್ಚಿ ಮಸಾಜ್ ಮಾಡಬೇಕು.  

ತುಳಸಿತುಳಸಿ ಎಲೆಗಳು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಲ್ಲವು. ತುಳಸಿ ಚಹಾ ಅಥವಾ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಮನಸ್ಸು ಶಾಂತವಾಗಿರುತ್ತದೆ.  ಬಿಳಿ ಮ್ಯೂಸ್ಲಿಇದು ಕೂಡ ಒತ್ತಡಕ್ಕೆ ಪರಿಹಾರ ನೀಡಬಲ್ಲದು. ಬಿಳಿ ಮ್ಯೂಸ್ಲಿಯ ಪುಡಿಯನ್ನು ಸೇವನೆ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...