alex Certify ಮಾಡಿ ಸವಿಯಿರಿ ರುಚಿಕರವಾದ ಕ್ಯಾಪಚಿನೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡಿ ಸವಿಯಿರಿ ರುಚಿಕರವಾದ ಕ್ಯಾಪಚಿನೋ

ಕಾಫಿ ಶಾಪ್ ಗೆ ಹೋಗಿ ಕ್ಯಾಪಚಿನೋ ಸವಿದಿರುತ್ತೀರಿ. ಮನೆಯಲ್ಲಿ ಕೂಡ ಅಷ್ಟೇ ರುಚಿಕರವಾದ ಕ್ಯಾಪಚಿನೋ ಮಾಡಿಕೊಂಡು ಎಲ್ಲರೂ ಸವಿಯಬಹುದು.

ಒಂದು ಗ್ಲಾಸ್ ಬೌಲ್ ಗೆ 4 ಟೇಬಲ್ ಸ್ಪೂನ್ ಇನ್ ಸ್ಟೆಂಟ್ ಕಾಫಿ ಪುಡಿ ಹಾಕಿಕೊಳ್ಳಿ. ನಂತರ ಇದಕ್ಕೆ 4 ಟೇಬಲ್ ಸ್ಪೂನ್ ಸಕ್ಕರೆ, 4 ಟೇಬಲ್ ಸ್ಪೂನ್ ಬಿಸಿ ನೀರು ಸೇರಿಸಿ 15 ನಿಮಿಷಗಳ ಕಾಲ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಈ ಮಿಶ್ರಣ ದಪ್ಪಗಾಗುತ್ತದೆ. ನಂತರ ಗ್ಯಾಸ್ ಮೇಲೆ ಹಾಲು ಇಟ್ಟು ಒಂದು ಕುದಿ ಬರಿಸಿಕೊಳ್ಳಿ. ನಂತರ ಒಂದು ಮಗ್ಗಿಗೆ 2 ಚಮಚದಷ್ಟು ಮಾಡಿಟ್ಟುಕೊಂಡ ಕ್ಯಾಪಚಿನೋ ಸೇರಿಸಿಕೊಳ್ಳಿ.

ನಂತರ ¾ ಕಪ್ ಹಾಲು ಸೇರಿಸಿಕೊಂಡು ನಿಧಾನಕ್ಕೆ ಮಿಕ್ಸ್ ಮಾಡಿಕೊಳ್ಳಿ. ಇದರ ಮೇಲೆ 2 ಚಮಚದಷ್ಟು ಕ್ಯಾಪಚಿನೋ ಅನ್ನು ಸೇರಿಸಿ ಚೆನ್ನಾಗಿ ಸಮತಟ್ಟು ಮಾಡಿಕೊಳ್ಳಿ. ಮೇಲುಗಡೆ ಸ್ವಲ್ಪ ಕಾಫಿಪುಡಿ ಉದುರಿಸಿ ಸರ್ವ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...