ಉಲ್ಲಾಸಭರಿತ ದಿನ ನಿಮ್ಮದಾಗಬೇಕೇ? ಹಾಗಿದ್ದರೆ ಸವಿಯಿರಿ ಈ ಫ್ರೂಟ್ ಡಯೆಟ್ ಡ್ರಿಂಕ್. ಈ ಪಾನೀಯವನ್ನ ಹಾಲು ಮತ್ತು ಹಣ್ಣುಗಳನ್ನು ಬಳಸಿ ಮಾಡುವುದರಿಂದ ದೇಹಕ್ಕೆ ತಂಪು ಹಾಗೆ ಪೌಷ್ಟಿಕಾಂಶಗಳು ದೊರೆಯುತ್ತದೆ. ಇಂದಿನ ಬಿಡುವಿಲ್ಲದ ಸಮಯದಲ್ಲಿ ಕೇವಲ ಹತ್ತೇ ನಿಮಿಷದಲ್ಲಿ ಇದನ್ನು ತಯಾರಿಸಿಕೊಳ್ಳಬಹುದು.
ಬೇಕಾಗಿರುವ ಸಾಮಗ್ರಿಗಳು : ಹಾಲು 150 ಮಿ.ಲೀ., ಬಾಳೆಹಣ್ಣು 1 , ಕರ್ಬೂಜ ಹಣ್ಣು 2 ಪೀಸ್, ಕಪ್ಪು ಖರ್ಜೂರ 5-6, ಜೇನುತುಪ್ಪ 1 ಚಮಚ.
ಮಾಡುವ ವಿಧಾನ : ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ, ಜೊತೆಗೆ ಕರ್ಬೂಜವನ್ನು ಚಿಕ್ಕ ಚಿಕ್ಕ ತುಂಡುಗಳಾಗಿಸಿಕೊಳ್ಳಿ, ಖರ್ಜೂರದ ಬೀಜಗಳನ್ನು ಬೇರ್ಪಡಿಸಿಟ್ಟುಕೊಳ್ಳಿ.
ನಂತರ ಬ್ಲೆಂಡರ್ ನಲ್ಲಿ ಬಾಳೆಹಣ್ಣು, ಕರ್ಬೂಜ, ಖರ್ಜೂರ, ಹಾಲು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಹಾಕಿ, ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ. ಆಮೇಲೆ ಇದನ್ನು ಒಂದು ಗ್ಲಾಸ್ ಕಂಟೈನರಿಗೆ ಹಾಕಿ. ರುಚಿಕರವಾದ ಹಾಗೂ ಹೆಲ್ತಿಯಾದ ಫ್ರೂಟ್ ಡಯೆಟ್ ಡ್ರಿಂಕ್ ರೆಡಿ ಟು ಸರ್ವ್.