alex Certify ಮಹಿಳೆಯರ ಮುಂದೆ ಬೆತ್ತಲಾಗುತ್ತಿದ್ದವನ ಖಾಸಗಿ ಅಂಗಕ್ಕೆ ಬೆಂಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಮುಂದೆ ಬೆತ್ತಲಾಗುತ್ತಿದ್ದವನ ಖಾಸಗಿ ಅಂಗಕ್ಕೆ ಬೆಂಕಿ….!

ವ್ಯಕ್ತಿಯೊಬ್ಬ ಮಹಿಳೆಯರು ಮತ್ತು ಯುವತಿಯರ ಮುಂದೆ ಬೆತ್ತಲಾಗಿ ಅಶ್ಲೀಲವಾಗಿ ವರ್ತಿಸಿದ್ದಕ್ಕೆ ಆಕ್ರೋಶಗೊಂಡ ಜನ ಆತನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಬೆತ್ತುಲ್ ಜಿಲ್ಲೆಯ ಕಜಲಿ ಗ್ರಾಮದ ವ್ಯಕ್ತಿಯೊಬ್ಬ ಪ್ರತಿ ದಿನವೂ ಇಂಥಹುದೇ ವರ್ತನೆ ತೋರಿಸುತ್ತಿದ್ದ ಎನ್ನಲಾಗಿದ್ದು, ಗ್ರಾಮಸ್ಥರು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಆತ ತನ್ನ ವರ್ತನೆಯನ್ನು ಮುಂದುವರಿಸಿದ್ದ.

ಶನಿವಾರವೂ ಸಹ ಬೆತ್ತಲಾದ ಆ ವ್ಯಕ್ತಿ ಮಹಿಳೆಯರ ಮುಂದೆ ತನ್ನ ಖಾಸಗಿ ಅಂಗ ತೋರಿಸಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಇಬ್ಬರು ಆತನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಗಾಯಗೊಂಡವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಆತನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...