alex Certify ಮಹಿಳಾ ಪ್ರವಾಸಿಗರಿಗೆ KSTDC ಬಂಪರ್ ಕೊಡುಗೆ; ಶೇ.50 ರಷ್ಟು ರಿಯಾಯಿತಿ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪ್ರವಾಸಿಗರಿಗೆ KSTDC ಬಂಪರ್ ಕೊಡುಗೆ; ಶೇ.50 ರಷ್ಟು ರಿಯಾಯಿತಿ ಘೋಷಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಹಿಳಾ ಪ್ರಯಾಣಿಕರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಮಾರ್ಚ್ 6ರಿಂದ 10ರ ವರೆಗಿನ ಅವಧಿಯಲ್ಲಿ ಇದು ಲಭ್ಯವಿರಲಿದೆ.

ಮಹಿಳಾ ಪ್ರವಾಸಿಗರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೊಡುಗೆಯ ಅವಧಿಯಲ್ಲಿ KSTDC ವತಿಯಿಂದ ನಿರ್ವಹಣೆ ಮಾಡುತ್ತಿರುವ ಮಯೂರ ಗ್ರೂಪ್ ಹೋಟೆಲ್ ಗಳಲ್ಲಿ ಕೊಠಡಿ ಬುಕ್ಕಿಂಗ್ ನಲ್ಲಿ ಶೇ.50 ಹಾಗೂ ಊಟೋಪಚಾರದ ಮೇಲೆ ಶೇ. 20ರಷ್ಟು ರಿಯಾಯಿತಿ ಸಿಗಲಿದೆ.

ಓರ್ವ ಮಹಿಳೆ/ಕುಟುಂಬ/ ಮಹಿಳೆಯರ ಗುಂಪು ಪ್ರವಾಸ ಕೈಗೊಂಡಲ್ಲಿ ಈ ರಿಯಾಯಿತಿ ಸಿಗಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-43344334 ಅಥವಾ ಮೊಬೈಲ್ ಸಂಖ್ಯೆ 8970650070/897088880 ಸಂಪರ್ಕಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...