alex Certify ಮಹಿಳಾ ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ ರ್ಯಾಪರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ ರ್ಯಾಪರ್..!

ರ್ಯಾಪರ್ ಒಬ್ಬರು ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಮೆರಿಕಾದ ಉತ್ತರ ಕೆರೊಲಿನಾದ 30 ವರ್ಷದ ರಾಪರ್ ಡಾಬಾಬಿ ಇತ್ತೀಚೆಗೆ ಮಹಿಳಾ ಅಭಿಮಾನಿಯೊಬ್ಬರನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದಾರೆ.

ಘಟನೆಯ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಬಳಕೆದಾರರು ರ್ಯಾಪರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿರೋ ಈ ವಿಡಿಯೋ 10.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ರ್ಯಾಪರ್ ಅನ್ನು ನೋಡಲು ಹೊರಗೆ ನೆರೆದಿದ್ದ ಅಭಿಮಾನಿಗಳ ಬಳಿಗೆ ಅವರು ಹೋಗಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳನ್ನು ತಬ್ಬಿಕೊಂಡಿದ್ದಾರೆ. ನಂತರ ಮಹಿಳೆಯ ಮುಖವನ್ನು ಹಿಡಿದುಕೊಂಡು ತನ್ನ ಎರಡೂ ಕೈಗಳಿಂದ ಆಕೆಯ ಮುಖವನ್ನು ಎಳೆಯಲು ಪ್ರಯತ್ನಿಸಿದ್ದಾನೆ. ಇದರಿಂದ ವಿಚಲಿತಳಾದ ಆಕೆ ಆತನಿಂದ ದೂರ ಎಳೆಯಲು ಪ್ರಯತ್ನಿಸಿದ್ದಾಳೆ.

ಮಹಿಳೆಯ ಮುಖವನ್ನು ಬಲವಾಗಿ ಎಳೆದ ರ್ಯಾಪರ್ ಆಕೆಯ ಬಾಯಿ ಹತ್ತಿರ ಮುಖವನ್ನು ತಂದಾಗ, ಅವಳು ತನ್ನ ಮುಖವನ್ನು ತಿರುಗಿಸಿದ್ದಾಳೆ. ಅವನನ್ನು ಚುಂಬಿಸಲು ಬಿಡುವುದಿಲ್ಲ. ರ್ಯಾಪರ್ ಎರಡು ಬಾರಿ ಮಹಿಳೆಯೊಂದಿಗೆ ತುಟಿಗೆ ಚುಂಬಿಸಲು ಪ್ರಯತ್ನಿಸಿದ್ದಾನೆ.

ಈ ಘಟನೆ ಫೆಬ್ರವರಿಯಲ್ಲಿ ನಡೆದಿದೆ ಎನ್ನಲಾಗಿದೆ. ರ್ಯಾಪರ್ ಬಲವಂತದಿಂದ ಚುಂಬಿಸಲು ಪ್ರಯತ್ನಿಸಿದ್ದು, ನೆಟ್ಟಿಗರಲ್ಲಿ ಕೋಪ ತರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...