ಒಂದು ಪಾತ್ರೆಗೆ ಮೂರು ಮೊಟ್ಟೆಯ ರಸವನ್ನು ಹಾಕಿಕೊಳ್ಳಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ.
ಇನ್ನೊಂದು ಬಟ್ಟಲಿನ ಮೇಲೆ ಬ್ರೆಡ್ ಇಟ್ಟು ನಾಲ್ಕೂ ಬ್ರೆಡ್ ಗೆ ಕೊತ್ತಂಬರಿ-ಪುದೀನಾ ಚಟ್ನಿಯನ್ನು ಹಚ್ಚಿ. ಚಟ್ನಿ ಹಾಕಿದ ನಂತ್ರ ಎರಡು ಬ್ರೆಡ್ ನಡುವೆ ಚೀಸ್ ಇಡಿ. ನಾನ್ ಸ್ಟಿಕ್ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಮೇಲೆ ಬ್ರೆಡ್ ಸ್ಲೈಸನ್ನು ಮೊಟ್ಟೆ ಮಿಶ್ರಣದಲ್ಲಿ ಅದ್ದಿ ಅದ್ರ ಮೇಲಿಡಿ. ಒಂದು ಭಾಗ ಗೋಲ್ಡನ್ ಕಲರ್ ಗೆ ಬಂದ ಮೇಲೆ ಇನ್ನೊಂದು ಭಾಗವನ್ನು ಬೇಯಿಸಿ. ಟೋಮೋಟೋ ಕೆಚಪ್ ಜೊತೆ ಇದನ್ನು ಸರ್ವ್ ಮಾಡಿ.