alex Certify ಮಳೆಗಾಲದಲ್ಲಿ ಹೀಗಿರಲಿ ಕಂದಮ್ಮಗಳ ಕಾಳಜಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಹೀಗಿರಲಿ ಕಂದಮ್ಮಗಳ ಕಾಳಜಿ….!

ಮಳೆಗಾಲದಲ್ಲಿ ಪುಟ್ಟ ಕಂದಮ್ಮಗಳ ಕಾಳಜಿ ಬಹಳ ಮುಖ್ಯ. ಈ ವೇಳೆ ಪುಟ್ಟ ಮಕ್ಕಳ ಬಗ್ಗೆ ಕಾಳಜಿ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಗುವಿಗೆ ತನಗೇನಾಗುತ್ತಿದೆ ಅಂತಾ ಹೇಳಲು ಬರುವುದಿಲ್ಲ. ಹೀಗಾಗಿ ಕಂದಮ್ಮಗಳ ಬಗ್ಗೆ ಜಾಗರೂಕತೆ ವಹಿಸುವುದು ಬಹಳ ಮುಖ್ಯ. ಇಂಥ ಸಂದರ್ಭ ಬರದ ಹಾಗೆ ಮಗುವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೇಗಿರಬೇಕು ಅನ್ನೋದಕ್ಕೆ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

ಮನೆಯ ಸ್ವಚ್ಛತೆ:

ಮೊದಲನೆಯದಾಗಿ ಮನೆಯ ಸ್ವಚ್ಛತೆ ಬಗ್ಗೆ ಗಮನ ಕೊಡಬೇಕು. ಮನೆಯ ಬಳಿಯಿರುವ ಕೈತೋಟ, ಸ್ನಾನಗೃಹಗಳು ಅಥವಾ ಬಾಲ್ಕನಿಗಳು, ನೀರಿನ ಕೊಚ್ಚೆ ಗುಂಡಿಗಳು ಮುಂತಾದವುಗಳ ಸ್ಪಚ್ಛತೆಗೆ ಹೆಚ್ಚಿನ ಗಮನ ಕೊಡುವುದು ಅತ್ಯಗತ್ಯ. ಯಾಕೆಂದರೆ ಇವು ಸೊಳ್ಳೆಗಳ ಕಾಟ ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಮನೆಯ ಸುತ್ತಮುತ್ತ ಎಲ್ಲೂ ಕೂಡ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ

ಹಾಲುಣಿಸುವ ತಾಯಂದಿರಿಗೆ ಆರೋಗ್ಯಕರ ಆಹಾರ:

ತಾಯಿಯ ಎದೆಹಾಲು ಮಗುವಿನ ದೇಹದಲ್ಲಿ ಪ್ರತಿಕಾಯಗಳಾಗಿ ಸೃಷ್ಟಿಯಾಗುತ್ತದೆ. ಅಲ್ಲದೆ ಜೀವಸತ್ವಗಳು ಹಾಗೂ ಖನಿಜಗಳಂತಹ ಪೋಷಕಾಂಶಗಳನ್ನು ಒದಗಿಸುವುದರಿಂದ ಮಕ್ಕಳಿಗೆ ಹೆಚ್ಚು ಹೆಚ್ಚು ಸ್ತನ್ಯಪಾನವನ್ನೇ ಉಣಿಸಿದರೆ ಒಳ್ಳೆಯದು. ಹಾಗೆಯೇ ಉತ್ತಮ ಆಹಾರ ಕ್ರಮವನ್ನೂ ಕೂಡ ತಾಯಂದಿರೂ ಅನುಸರಿಬೇಕು. ಆ ಪೋಷಕಾಂಶಗಳು ತಾಯಿಯ ಎದೆಹಾಲಿನ ಮುಖಾಂತರವೇ ಮಗುವಿಗೆ ಹೋಗುವುದರಿಂದ ಆರೋಗ್ಯಕರ ಆಹಾರ ಸೇವಿಸಬೇಕು. ಜಂಕ್ ಫುಡ್, ಎಣ್ಣೆ ಪದಾರ್ಥ ಮುಂತಾದವುಗಳಿಗೆ ಬ್ರೇಕ್ ಹಾಕಿದರೆ ಒಳಿತು.

ವೈದ್ಯರನ್ನು ಸಂಪರ್ಕಿಸಿ:

ಜ್ವರ, ಶೀತ, ತಲೆನೋವು ಮುಂತಾದವುಗಳು ಮಾನ್ಸೂನ್ ಸಮಯದಲ್ಲಿ ಸಾಮಾನ್ಯವಾಗಿ ಕಾಣಬರುವ ಕಾಯಿಲೆಗಳಾಗಿವೆ. ಸೋಂಕನ್ನು ಆರಂಭಿಕ ಹಂತದಲ್ಲೇ ತಡೆಗಟ್ಟಲು ವೈದ್ಯರನ್ನು ಸಂಪರ್ಕಿಸುತ್ತಿರಬೇಕಾದುದು ಅತ್ಯಗತ್ಯ. ಕಂದಮ್ಮಗಳಿಗೆ ತನಗೇನಾಗಿದೆ ಅಂತಾ ಹೇಳಲು ಬರುವುದಿಲ್ಲ. ಹೀಗಾಗಿ ಆಗಾಗ ವೈದ್ಯರ ಸಂಪರ್ಕ ಮಾಡಿ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಸೊಳ್ಳೆಗಳಿಂದ ಎಚ್ಚರವಹಿಸಿ:

ಸೊಳ್ಳೆ ಕಡಿತವು ಮಗುವಿಗೆ ಸಾಕಷ್ಟು ನೋವನ್ನುಂಟು ಮಾಡುತ್ತದೆ. ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದಂತಹ ಸೊಳ್ಳೆ ನಿವಾರಕ ಹೊಂದಿದ್ದರೆ ಅವುಗಳನ್ನು ಬಳಸಿಕೊಳ್ಳಬಹುದು. ಸಂಜೆಯಾಗುತ್ತಿದ್ದಂತೆ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಮಗು ಮಲಗುವ ಹಾಸಿಗೆಗೆ ಸೊಳ್ಳೆ ಪರದೆಯನ್ನು ಹಾಕಿ ಮಲಗಿಸಿದರೆ ಒಳಿತು.

ನಿಯಮಿತವಾಗಿ ಡೈಪರ್ ಬದಲಾಯಿಸಿ:

ಡೈಪರ್ ನ್ನು ನಿಯಮಿತವಾಗಿ ಬದಲಾಯಿಸುತ್ತಿರಿ ಅಥವಾ ಮಗುವಿಗೆ ಸ್ವಲ್ಪ ಹೊತ್ತು ಡೈಪರ್ ಮುಕ್ತವಾಗಿರಿಸಿ. ಒದ್ದೆಯಾದ ಡೈಪರ್ ಗಳನ್ನು ಹಾಗೆಯೇ ಬಿಡುವುದರಿಂದ ನಿಮ್ಮ ಮಗುವಿಗೆ ಶೀತವಾಗಬಹುದು ಅಥವಾ ಡೈಪರ್ ರ್ಯಾಶಸ್ ಗೆ ಕಾರಣವಾಗಬಹುದು. ಯಾಕೆಂದರೆ ಇದು ಅನಾರೋಗ್ಯಕರ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳ ಸೋಂಕಿನ ಸಂತಾನೋತ್ಪತ್ತಿಯ ಸ್ಥಳವಾಗಿ ಬದಲಾಗುತ್ತದೆ. ಹೀಗಾಗಿ ಮೊದಲಿಗಿಂತ ಹೆಚ್ಚು ಬಾರಿ ಡೈಪರ್ ನ್ನು ಪರಿಶೀಲಿಸಿ ಮತ್ತು ತಕ್ಷಣ ಬದಲಾಯಿಸಿ.

ಬೆಚ್ಚಗಿನ ಉಡುಪು ಧರಿಸಿ:

ಮಳೆಗಾಲದಲ್ಲಿ ವಾತಾವರಣವು ತಂಪಾಗಿರುವುದರಿಂದ ಶೀತ ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಬಹುದು. ಹೀಗಾಗಿ ಹತ್ತಿಯಿಂದ ಅಥವಾ ಉಣ್ಣೆಯಿಂದ ತಯಾರಿಸಿದ ಬಟ್ಟೆಯನ್ನು ಕಂದಮ್ಮಗಳಿಗೆ ತೊಡಿಸಿ. ಇವು ಮಕ್ಕಳನ್ನು ಬೆಚ್ಚಗಿಡುವಲ್ಲಿ ನೆರವಾಗುತ್ತದೆ. ಹಾಗೆಯೇ ಬಟ್ಟೆಯು ಸಂಪೂರ್ಣವಾಗಿ ಒಣಗಿದೆಯೇ ಅಂತಾ ತಿಳಿದುಕೊಳ್ಳಿ.

ಕೈಗಳನ್ನು ಸ್ವಚ್ಛವಾಗಿರಿಸಿ:

ಎಲ್ಲಾ ಸಮಯದಲ್ಲೂ ಕೈಗಳ ಸ್ವಚ್ಛತೆ ಕಡೆಗೆ ಗಮನ ಹರಿಸಿ. ನಿಮ್ಮ ಮಗುವನ್ನು ಮುಟ್ಟುವ ಮೊದಲು ಕೈತೊಳೆದುಕೊಳ್ಳಿ. ಇಲ್ಲದಿದ್ದಲ್ಲಿ ರೋಗಾಣುಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಉಗುರುಗಳು ಉದ್ದ ಬರದಂತೆ ತುಂಡರಿಸುತ್ತಿರಿ. ಅಲ್ಲದೆ ಮಗುವಿನ ಆಟಿಕೆಗಳನ್ನು ಬಿಸಿ ನೀರಿನಿಂದ ತೊಳೆದು ಮಗುವಿಗೆ ಉಪಯೋಗಿಸಲು ಕೊಡಬೇಕು.

ಆಹಾರವು ಫ್ರೆಶ್ ಆಗಿರಲಿ:

ಮಗುವಿಗೆ ಕೊಡುವ ಆಹಾರವು ಫ್ರೆಶ್ ಆಗಿರಲಿ. ಫ್ರಿಜ್ಜಲ್ಲಿ ಇಟ್ಟಂತಹ ಆಹಾರವನ್ನು ಮಗುವಿಗೆ ಕೊಡಬಾರದು. ಪ್ರತಿಯೊಂದು ಬಾರಿ ಮಗುವಿಗೆ ಉಣಬಡಿಸಿದಾಗಲು ಆಗಷ್ಟೇ ತಯಾರಿಸಿದ ಆಹಾರವನ್ನು ನೀಡಬೇಕು. ಮಗುವಿನ ತಟ್ಟೆ, ಚಮಚ ಮುಂತಾದವುಗಳನ್ನು ಸ್ಪಚ್ಛವಾಗಿಡಿ. ಮಗುವಿಗೆ ಆಹಾರ ಕೊಡುವ ಮೊದಲು ತಟ್ಟೆ, ಲೋಟ ತೊಳೆದು ಉಪಯೋಗಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...