ಮಳೆಗಾಲದಲ್ಲಿ ಬಿಸಿಬಿಸಿ ಆಹಾರವನ್ನು ನಾಲಿಗೆ ಬಯಸುತ್ತದೆ. ವಿಶೇಷವಾಗಿ ಕರಿದ ತಿಂಡಿಗಳನ್ನು ನಾಲಿಗೆ ಇಷ್ಟಪಡುತ್ತದೆ. ಪಾನಿಪುರಿ, ಮಸಾಲಾ ಪುರಿ ತಿಂದು ಬೇಸರವಾಗಿದ್ದರೆ ಮನೆಯಲ್ಲಿ ಶಾವಿಗೆ ಬಾಳೆಕಾಯಿ ಟಿಕ್ಕಾ ಮಾಡಿ ಸೇವಿಸಿ.
ಶಾವಿಗೆ ಬಾಳೆಕಾಯಿ ಟಿಕ್ಕಾ ಮಾಡಲು ಬೇಕಾಗುವ ಪದಾರ್ಥ :
ಬಾಳೆಕಾಯಿ-3
ಹಸಿರು ಮೆಣಸಿನಕಾಯಿ – 2
ಶುಂಠಿ – 1 ಇಂಚಿನ ತುಂಡು
ಬೇಯಿಸಿದ ಹಸಿರು ಬಟಾಣಿ – 1/4 ಕಪ್
ಹಿಂಗು – 1 ಚಿಟಿಕಿ
ಕೆಂಪು ಮೆಣಸಿನ ಪುಡಿ – ¼ ಚಮಚ
ಗರಂ ಮಸಾಲ ಪುಡಿ – 1/2 ಚಮಚ
ಆಮ್ಚೂರ್ ಪುಡಿ – 1/4 ಚಮಚ
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – ಸ್ವಲ್ಪ
ಶಾವಿಗೆ – ಸ್ವಲ್ಪ
ಪ್ರತಿ ದಿನ ಈ ಸಮಯದಲ್ಲಿ ಚಾಕೊಲೇಟ್ ತಿಂದ್ರೆ ಇಳಿಯಲಿದೆ ತೂಕ….!
ಶಾವಿಗೆ ಬಾಳೆಕಾಯಿ ಟಿಕ್ಕಾ ಮಾಡುವ ವಿಧಾನ :
ಬಾಳೆಕಾಯಿ ಟಿಕ್ಕಿಯನ್ನು ತಯಾರಿಸಲು, ಮೊದಲು ಬಾಳೆಕಾಯಿ ಬೇಯಿಸಿ, ಸಿಪ್ಪೆ ತೆಗೆಯಿರಿ. ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಇನ್ನೊಂದು ಕಡೆ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬಟಾಣಿಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಈ ಮಿಶ್ರಣವನ್ನು ಬೇಯಿಸಿದ ಬಾಳೆಕಾಯಿ ಮಿಶ್ರಣಕ್ಕೆ ಹಾಕಿ.
ಇದಕ್ಕೆ ಹಿಂಗು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಆಮ್ಚೂರ್ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆಗೆ ಎಣ್ಣೆ ಹಾಕಿ ಗ್ಯಾಸ್ ಮೇಲಿಡಿ. ಎಣ್ಣೆ ಬಿಸಿಯಾಗ್ತಿದ್ದಂತೆ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ, ಸ್ವಲ್ಪ ಪುಡಿ ಮಾಡಿದ ಶಾವಿಗೆಯಲ್ಲಿ ಅದ್ದಿ ಬಿಡಿ. ಬಂಗಾರದ ಬಣ್ಣಕ್ಕೆ ಬಂದ ನಂತ್ರ ತೆಗೆದು ಸರ್ವ್ ಮಾಡಿ.