ಮಳೆಗಾಲ ಬಂತು ಎಂದರೆ ಸಾಕು ಸಾಕಷ್ಟು ಸಮಸ್ಯೆಗಳು ತನ್ನಿಂದ ತಾನೇ ಆರಂಭವಾಗಿಬಿಡುತ್ತೆ. ಅದರಲ್ಲೂ ಫ್ರಿಡ್ಜ್ಗಳಿಗೆ ಮಾನ್ಸೂನ್ ಸಮಯದಲ್ಲಿ ಶೀಲಿಂಧ್ರಗಳು ದಾಳಿ ಇಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಫ್ರಿಡ್ಜ್ನಿಂದ ವಾಸನೆ ಬರಲು ಆರಂಭವಾಗುತ್ತದೆ. ಫ್ರಿಡ್ಜ್ನಿಂದ ವಾಸನೆ ಬರದಂತೆ ತಡೆಯಲು ಏನು ಮಾಡ್ಬೇಕು..? ಇಲ್ಲಿದೆ ಸ್ಟೋರಿ.
ಮೊದಲನೇಯದಾಗಿ ನೀವು ಕಾಲ ಕಾಲಕ್ಕೆ ಫ್ರಿಡ್ಜ್ ಸ್ವಚ್ಛಗೊಳಿಸೋದನ್ನು ರೂಢಿಸಿಕೊಳ್ಳಬೇಕು. ಫ್ರಿಡ್ಜ್ನಲ್ಲಿ ಇರುವ ಡೀಪ್ ಕ್ಲೀನ್ ಬಟನ್ನ್ನು 2 ವಾರಕ್ಕೆ ಒಮ್ಮೆಯಾದರೂ ಒತ್ತಿ . ಇದರಿಂದ ಫ್ರೀಜರ್ನಲ್ಲಿ ಕೆಟ್ಟ ನೀರಿನಿಂದ ನಿರ್ಮಾಣವಾದ ಐಸ್ಗಳು ಕರಗಿ ಕ್ಲೀನ್ ಆಗುತ್ತದೆ.
ಬೆಚ್ಚನೆಯ ನೀರಿಗೆ ಸೋಪಿನ ದ್ರಾವಣ ಮಿಶ್ರಣ ಮಾಡಿ ಬಳಿಕ ಅದರಿಂದ ಫ್ರಿಡ್ಜ್ನ್ನು ಒರೆಸಿ. ಇದಾದ ಬಳಿಕ ಒಣ ಬಟ್ಟೆಯಿಂದ ಬ್ರಿಡ್ಜ್ನ ಮೂಲೆ ಮೂಲೆಯನ್ನು ಒರೆಸಿರಿ. ಫ್ರಿಡ್ಜ್ನ ರ್ಯಾಕ್ಸ್ನ್ನು ಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಇನ್ನು ಫ್ರಿಡ್ಜ್ನ ವೈಸರ್ಗಳಲ್ಲಿ ಕೊಳೆ ಸಾಕಷ್ಟು ಇರುತ್ತದೆ, ಇದಕ್ಕೆ ನೀವು ನೀರಿಗೆ ವಿನೆಗರ್ ಮಿಕ್ಸ್ ಮಾಡಬೇಕು. ಇದಕ್ಕೆ ಬಟ್ಟೆಯನ್ನು ಅದ್ದಿ. ಆ ಬಟ್ಟೆಯಿಂದ ಫ್ರಿಡ್ಜ್ನ ವೈಸರ್ ಸ್ವಚ್ಛಗೊಳಿಸಿ. ಈ ರೀತಿ ಮಾಡೋದ್ರಿಂದ ನಿಮ್ಮ ಪ್ರಿಡ್ಜ್ನಲ್ಲಿ ಯಾವುದೇ ವಾಸನೆ ಬರೋದಿಲ್ಲ.