alex Certify ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ನಿವಾರಣೆಗೆ ಈ ಜ್ಯೂಸ್ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ನಿವಾರಣೆಗೆ ಈ ಜ್ಯೂಸ್ ಬೆಸ್ಟ್

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ….? ಹಾಗಿದ್ದರೆ ಮನೆಯಲ್ಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಕೇವಲ ಈ ಜ್ಯೂಸ್ ಗಳನ್ನು ಸೇವಿಸಿದರೆ ಸಾಕು. ಯಾವುದು ಆ ಜ್ಯೂಸ್ ಅಂತ ನೀವೂ ತಿಳಿಯಿರಿ.

ಮೂಸಂಬಿ ಜ್ಯೂಸ್

ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಕಾರಿ ಅಂಶ ನಾಶವಾಗುತ್ತದೆ. ಮೂಸಂಬಿ ಜ್ಯೂಸ್ ಗೆ ಒಂದು ಚಿಟಿಕಿ ಉಪ್ಪು ಸೇರಿಸಿ ಕುಡಿದರೆ ಉತ್ತಮ.

ಪೈನಾಪಲ್ ಜ್ಯೂಸ್

ಪೈನಾಪಲ್ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುತ್ತದೆ. ಇದರಿಂದಾಗಿ ಮಲ ವಿಸರ್ಜನೆ ಸುಗಮವಾಗುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೀಗಾಗಿ ಕರುಳು ಸಂಬಂಧಿ ಸಮಸ್ಯೆಗಳಿಗೆ ಕಲ್ಲಂಗಡಿ ಹಣ್ಣು ಉತ್ತಮ.

ನಿಂಬೆ ಪಾನಕ

ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶ ಅಜೀರ್ಣ ಹೋಗಲಾಡಿಸುತ್ತದೆ. ಮಲ ವಿಸರ್ಜಿಸಲು ಕಷ್ಟವಾಗುತ್ತಿದ್ದರೆ, ಪ್ರತಿ ನಿತ್ಯ ಎರಡು ಲೋಟ ನಿಂಬೆ ಪಾನಕ ಸೇವಿಸಿದರೆ ಸಾಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...