
ಸುದರ್ಶನ್ ಪಟ್ನಾಯಕ್ 125 ಮರಳಿನ ರಥಗಳನ್ನು ರಚಿಸಿದರು. ಹಾಗೂ ಭಗವಾನ್ ಜಗನ್ನಾಥನ ಭವ್ಯ ಕಲಾಕೃತಿಯನ್ನು ರಚಿಸಿದ್ದಾರೆ. ರಥಯಾತ್ರೆಯ ಶುಭ ಸಂದರ್ಭದಲ್ಲಿ ಪುರಿ ಬೀಚ್ನಲ್ಲಿ ನನ್ನ ಮರಳು ಕಲೆ ಎಂದು ಈ ಫೊಟೋಗೆ ಸುದರ್ಶನ್ ಪಟ್ನಾಯಕ್ ಶೀರ್ಷಿಕೆ ನೀಡಿದ್ದಾರೆ .
ಕೋವಿಡ್ನಿಂದಾಗಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಭಗವಾನ್ ಜಗನ್ನಾಥನ ರಥಯಾತ್ರೆಯು ಪುರಿಯಲ್ಲಿ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಆರಂಭಗೊಂಡಿದೆ.