alex Certify ಮರಕ್ಕೆ ಲಾರಿ ಗುದ್ದಿದರೂ ವ್ಯಕ್ತಿ ಬದುಕುಳಿದಿದ್ದೆ ಪವಾಡ…! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಭಯಾನಕ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಕ್ಕೆ ಲಾರಿ ಗುದ್ದಿದರೂ ವ್ಯಕ್ತಿ ಬದುಕುಳಿದಿದ್ದೆ ಪವಾಡ…! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಭಯಾನಕ ದೃಶ್ಯ

ಸಾವು ಯಾವಾಗ, ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿ ಬಂದು ಎರಗುತ್ತೆ ಅನ್ನೋ ಚಿಕ್ಕ ಕ್ಲೂ ಯಾರಿಗೂ ಇರೋಲ್ಲ. ಆದರೆ ಆಯುಷ್ಯ ರೇಖೆ ಗಟ್ಟಿ ಇದ್ದರೆ ಎಷ್ಟೇ ದೊಡ್ಡ ಅನಾಹುತ ಸಂಭವಿಸಿದರೂ ಅವರಿಗೆ ಚಿಕ್ಕದ್ದೊಂದು ಗಾಯ ಕೂಡಾ ಆಗಿರೋಲ್ಲ…… ಅಂಥಹದ್ದೊಂದು ಪವಾಡದ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಘಟನೆ ನಡೆದಿರೋದು ಬ್ರೆಜಿಲ್‌ನಲ್ಲಿ.

ಇಲ್ಲಿ ಲಾರಿಯೊಂದು ರಸ್ತೆಯಲ್ಲಿ ಬರುತ್ತಿರುವಾಗ ನಿಯಂತ್ರಣ ಕಳೆದುಕೊಳ್ಳುತ್ತೆ. ಹಾಗೆ ಕಂಟ್ರೋಲ್ ತಪ್ಪಿದ್ದ ಆ ಲಾರಿ ಫುಟ್‌ಪಾತ್‌ನಲ್ಲಿರುವ ಮರಕ್ಕೆ ಹೋಗಿ ಗುದ್ದುತ್ತೆ. ಆ ಲಾರಿ ಮರಕ್ಕೆ ಗುದ್ದಿರೋ ರೀತಿಯೇ ಭಯಾನಕವಾಗಿದೆ. ಲಾರಿಯ ಮುಂದಿನ ಭಾಗದ ಎರಡೂ ಗಾಲಿಗಳು ಗಾಳಿಯಲ್ಲಿ ಹಾರಿ ನೆಲಕ್ಕೆ ಬಂದು ಅಪ್ಪಳಿಸುತ್ತೆ. ಲಾರಿ ಗುದ್ದಿದ ಮರದ ಕೆಳಗೆ ವ್ಯಕ್ತಿಯೊಬ್ಬ ನಿಂತಿರುತ್ತಾನೆ. ಲಾರಿಯೊಂದು ತನ್ನ ಹಿಂದಿರೋ ಮರಕ್ಕೆ ಗುದ್ದುತ್ತೆ, ಅನ್ನೋ ಅರಿವೆಯೂ ಆ ವ್ಯಕ್ತಿಗೆ ಇರಲಿಲ್ಲ. ಗೊತ್ತಾಗಿದ್ದರೂ ಆತ ತಪ್ಪಿಸಿಕೊಳ್ಳೊದಕ್ಕೆ ಅಲ್ಲಿ ಒಂದಿಂಚಿನ ಜಾಗವೂ ಇರಲಿಲ್ಲ,

ಈ ದೃಶ್ಯವನ್ನ ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತೆ. ಹೀಗೆ ಮರಕ್ಕೆ ಗುದ್ದಿದ ಲಾರಿ ಆತನಿಗೆ ಟಚ್ ಕೂಡಾ ಆಗಿದೆ. ಆದರೂ ಆತನಿಗೆ ಚಿಕ್ಕದೊಂದು ಗಾಯವೂ ಆಗಿರಲಿಲ್ಲ. ಸಿಸಿಟಿವಿಯಲ್ಲಿ ಸೆರೆಯಾಗಿರೋ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಜನರು ಈ ಭಯಾನಕ ವಿಡಿಯೋ ನೋಡಿ ಆ ವ್ಯಕ್ತಿ ಬದುಕುಳಿದಿದ್ದೇ ಪವಾಡ ಅನ್ನುತ್ತಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...