alex Certify ಮನೆ ಮಾಲೀಕರಿಂದ ಕೆಲಸದಾಕೆಯ ಹುಟ್ಟುಹಬ್ಬ ಆಚರಣೆ; ಭಾವುಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮಾಲೀಕರಿಂದ ಕೆಲಸದಾಕೆಯ ಹುಟ್ಟುಹಬ್ಬ ಆಚರಣೆ; ಭಾವುಕ ವಿಡಿಯೋ ವೈರಲ್

ಹುಟ್ಟುಹಬ್ಬ ಆಚರಿಸಿದ ಮನೆ ಮಂದಿ: ಭಾವುಕಳಾದ ಮನೆ ಕೆಲಸದಾಕೆ... ವಿಡಿಯೋ ವೈರಲ್ಮುಂಬೈ: ಇಂದಿನ ದಿನಗಳಲ್ಲಿ ಮನೆಯವರು ತಮ್ಮ ಮನೆಯ‌ ಸದಸ್ಯರದ್ದೇ ಹುಟ್ಟುಹಬ್ಬ ಆಚರಿಸೋದಕ್ಕೂ ಸಮಯ ಇರೋದಿಲ್ಲ. ಸಮಯ ಇದ್ದರೂ ಆಚರಿಸೋದು ತೀರ ಕಡಿಮೆ. ಆದರೆ ಇಲ್ಲೊಂದು ಅಪರೂಪದ ಘಟನೆ ಎಂಬಂತೆ ತನ್ನ ಮನೆ ಕೆಲಸದಾಕೆಯ ಹುಟ್ಟುಹಬ್ಬವನ್ನು ಸರ್ಪೈಸ್ ಆಗಿ ಆಚರಣೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಸಿಟಿ ಜೀವನದಲ್ಲಿ ಓಡುವ ಯಾಂತ್ರಿಕರ ರೀತಿ ಕೆಲಸ ಮಾಡುವ ಮನುಷ್ಯರಿಗೆ ಸೆಲೆಬ್ರೇಷನ್ ಅನ್ನೋದು ಒಂದು ರೀತಿ ಕಷ್ಟ. ಅಂತದರಲ್ಲಿ ಮನೆ ಕೆಲಸದವರ ಬರ್ತಡೇ ಮಾಡೋದು ಅಂದ್ರೆ ಸುಮ್ಮನೆ ಮಾತಲ್ಲ. ಇಲ್ಲೊಬ್ಬ ಮನೆ ಮಾಲೀಕಳು ತನ್ನ ಮನೆಯ ಕೆಲಸದಾಕೆಯ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಕೇಕ್ ತರಿಸಿ ಕತ್ತರಿಸುವ ಮೂಲಕ ಆಕೆಗೆ ಖುಷಿ ನೀಡಿದ್ದಾರೆ.

ಈ ವಿಡಿಯೋವನ್ನು ವೈರಲ್ ಭಯಾನಿ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಒಂಭತ್ತು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ನು ವಿಡಿಯೋ ಜೊತೆಗೆ ತಮ್ಮ ಅನಿಸಿಕೆಯನ್ನೂ ಬರೆಯಲಾಗಿದೆ. ಹುಟ್ಟುಹಬ್ಬದ ಶುಭಾಶಯಗಳು ಮೌಶಿ ಎಂದು ಬರೆಯಲಾಗಿದೆ.

ಜೊತೆಗೆ ಅವರು ಬರೆದುಕೊಂಡಿರೋ ಪ್ರಕಾರ, ನಾವು ಆಕೆಯ ಮೊಗದಲ್ಲಿ ನಗು ತರಿಸಲು ಬಯಸಿದೆವು. ಆಕೆಯ ಹುಟ್ಟುಹಬ್ಬದ ಬಗ್ಗೆ ತುಂಬಾ ಉತ್ಸಾಹ‌ ಹೊಂದಿದ್ದಳು. ನಮ್ಮ ಮಾವ ಆಕೆಗೆಂದು ಕೇಕ್ ತರಿಸಿದರು ಹಾಗೂ ನಾವು ಜೊತೆಯಾಗಿ ಆಕೆಯ ಹುಟ್ಟುಹಬ್ಬವನ್ನು ಆಚರಿಸಿದೆವು. ಕೆಲವೊಮ್ಮೆ ಬೇರೆಯವರ ಮೊಗದಲ್ಲಿ ನಗು ತರಿಸುವ ಸಲುವಾಗಿ ನಾವು ಮಾಡುವ ಸಣ್ಣ ಕಾರ್ಯಗಳು ಶಾಶ್ವತವಾಗಿ ಉಳಿಯುವವು. ಪ್ರತಿದಿನ ನಿದ್ದೆ ಮಾಡುವ ಮುನ್ನ ಯಾರಿಗಾದರೂ ಏನಾದರೂ ಒಳ್ಳೆಯದ್ದನ್ನು ಮಾಡಿ, ಈ ರೀತಿಯ ಒಳ್ಳೆಯ ಕೆಲಸಗಳು ನಿಮ್ಮನ್ನು ಜೀವಂತವಾಗಿರಿಸುತ್ತವೆ. ನಮ್ಮ ಮನೆಯನ್ನು ಸದಾ ಕಾಲ ಸ್ವಚ್ಛ ಹಾಗೂ ಅಚ್ಚುಕಟ್ಟಾಗಿ ಇರಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...